DAKSHINA KANNADA
ಅರೂರು ಲಕ್ಷ್ಮೀ ರಾವ್ ಅವರಿಗೆ ‘ಅಮೃತ ಪ್ರಕಾಶ ಸಮಾಜ ಸೇವಾ ರತ್ನ ಪ್ರಶಸ್ತಿ 2024’ ಗೌರವ ಪ್ರದಾನ

ಮಂಗಳೂರು : ಸಮಾಜ ಸೇವಕಿ, ಹಿರಿಯ ಸಂಘಟಕಿ, ಆರೂರು ಲಕ್ಷ್ಮೀ ರಾವ್ ಅವರಿಗೆ ‘ಅಮೃತ ಪ್ರಕಾಶ ಸಮಾಜ ಸೇವಾ ರತ್ನ ಪ್ರಶಸ್ತಿ 2024’ ನ್ನು ಅವರ ಸ್ವಗೃಹದಲ್ಲಿ ನೀಡಿ ಗೌರವಿಸಲಾಯಿತು.
ಅಮೃತ ಪ್ರಕಾಶ ಪತ್ರಿಕೆ ಈ ಪ್ರಶಸ್ತಿಯನ್ನು ಹಿರಿಯ ಸಾಧಕರಿಗೆ ಕೊಡಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ , ಯುಗ ಪುರುಷ ಪತ್ರಿಕೆಯ ಸಂಪಾದಕ ಭುವನಾಭಿರಾಮ ಉಡುಪ, ಲೇಖಕಿ ವೀಣಾ ಶೆಟ್ಟಿ, ಲೇಖಕಿ ಸುಧಾ ನಾಗೇಶ್, ಶಿಕ್ಷಕಿ ಸುರೇಖಾ ಯಾಳವಾರ, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಮಂಡಲಿ ಸದಸ್ಯರಾದ ಸುಮಾ ಅರುಣ್ ಮಾನ್ವಿ,ಸತ್ಯ ಪ್ರಕಾಶ್ ಶೆಟ್ಟಿ, ಯೋಗ ಗುರು ಮಹಾಬಲ ಭಟ್ ಉಪಸ್ಥಿತರಿದ್ದರು . ಡಾ. ಮಾಲತಿ ಶೆಟ್ಟಿ ಸ್ವಾಗತಿಸಿ, ಸುರೇಖಾ ಯಾಳವಾರ ವಂದಿಸಿದರು.
