Connect with us

    FILM

    ಶಿವರಾಜ್ ಕುಮಾರ್ ನೋಡಿದ ಕೂಡಲೇ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಮಗಳು ಆರಾಧ್ಯಾ

    ಮುಂಬೈ ಸೆಪ್ಟೆಂಬರ್ 19: ಕುಡ್ಲದ ಬೆಡಗಿ ಐಶ್ವರ್ಯಾ ರೈ ಅವರು ತಮ್ಮ ಮಗಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳಸಿದ್ದಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಸ್ಟಾರ್ ಗಳ ಮಕ್ಕಳಿಗೆ ಸರಿಯಾದ ಸಂಸ್ಕಾರ ಇರುವುದಿಲ್ಲ ಎನ್ನುವ ಮಾತು ಇದೆ ಆದರೆ ಐಶ್ವರ್ಯಾ ರೈ ಹಾಗಲ್ಲ. ಮಗಳಿಗೆ ಪ್ರೀತಿಯ ಜೊತೆಗೆ ಸಂಸ್ಕಾರವನ್ನೂ ನೀಡಿದ್ದಾರೆ. ಇದಕ್ಕೆ ಸಾಕ್ಷಿ ಆಗುವಂಥ ಘಟನೆ ಸೈಮಾದಲ್ಲಿ ನಡೆದಿದೆ. ಕನ್ನಡದ ಸ್ಟಾರ್ ಹೀರೋ ಶಿವರಾಜ್​ಕುಮಾರ್ ಅವರನ್ನು ನೋಡುತ್ತಿದ್ದಂತೆ ಆರಾಧ್ಯಾ ಅವರು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.


    ಐಶ್ವರ್ಯಾ ರೈ ಹಾಗೂ ಅವರ ಮಗಳು ಆರಾಧ್ಯಾ ಇತ್ತೀಚೆಗೆ ಸೈಮಾ ಅವಾರ್ಡ್ಸ್​​ಗೆ ತೆರಳಿದ್ದರು. ದುಬೈನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ದಕ್ಷಿಣ ಭಾರತದ ಪ್ರಮುಖ ನಟರುಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಿವರಾಜ್​ಕುಮಾರ್ ಹಾಗೂ ತಮಿಳು ನಟ ವಿಕ್ರಂ ಭೇಟಿ ಆಗಿದ್ದರು.

    ಈ ವೇಳೆ ಅಲ್ಲೇ ಇದ್ದ ಐಶ್ವರ್ಯಾ ರೈ ಅವರು ಶಿವರಾಜ್​ಕುಮಾರ್ ಅವರನ್ನು ನೋಡುತ್ತಿದ್ದಂತೆ ಓಡೋಡಿ ಬಂದು ಶಿವಣ್ಣನಿಗೆ ಶೇಕ್​ಹ್ಯಾಂಡ್ ಮಾಡಿದರು. ಇದರ ಜೊತೆಗೆ ಅಲ್ಲೇ ಇದ್ದ ಮಗಳಿಗೆ ಶಿವರಾಜ್​ಕುಮಾರ್ ಅವರನ್ನು ಪರಿಚಯಿಸಿದರು. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.


    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶ್ವಸುಂದರಿ ಮಗಳು, ಬಚ್ಚನ್ ಕುಟುಂಬದ ಕುಡಿಯಾದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಹಿರಿಯರ ಆಶೀರ್ವಾದ ಪಡೆದ ಆರಾಧ್ಯಾ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *