ವಿಜಯಾ ಬ್ಯಾಂಕ್ ವಿಲೀನ ದಿನ ಕರಾಳದಿನವಾಗಿ ಆಚರಿಸಲು ಕಾಂಗ್ರೇಸ್ ಕರೆ

ಮಂಗಳೂರು ಮಾರ್ಚ್ 31: ನಾಳೆಯಿಂದ ಕರಾವಳಿಯಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ವಿಜಯಾ ಬ್ಯಾಂಕ್ ಹೆಸರು ಇನ್ನು ನೆನಪು ಮಾತ್ರ. ವಿಜಯ ಬ್ಯಾಂಕ್ ನಾಳೆಯಿಂದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನವಾಗಲಿದೆ.

ಕರಾವಳಿಯಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಬ್ಯಾಂಕ್ ಒಂದಾಗಿರುವ ವಿಜಯಾ ಬ್ಯಾಂಕ್ ನಾಳೆಯಿಂದ ಬ್ಯಾಂಕ್ ಬರೋಡಾ ಆಗಿ ನಾಮಕರಣಗೊಳ್ಳಲಿದೆ. ಏಪ್ರಿಲ್ 1ರಿಂದ ವಿಜಯ ಬ್ಯಾಂಕ್ ದೇನಾ ಬ್ಯಾಂಕ್ ಕೇಂದ್ರ ಸರಕಾರಿ ಸೌಮ್ಯದ ಬ್ಯಾಂಕ್ ಆಫ್ ಬರೋಡಾದಲ್ಲಿ ಶಾಶ್ವತವಾಗಿ ವಿಲೀನವಾಗಲಿದೆ.

ವಿಜಯ ಬ್ಯಾಂಕ್ ವಿಲೀನದ ಕೇಂದ್ರ ಸರ್ಕಾರದ ಈ ನೀತಿಗೆ ಕರಾವಳಿಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ವಿಲೀನ ಪ್ರಕ್ರೀಯೆಯನ್ನು ಕಾಂಗ್ರಸ್ ಪ್ರಬಲವಾಗಿ ವಿರೋಧಿಸಿ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು. ಆದರೆ ಕೇಂದ್ರ ಸರಕಾರದ ಆದೇಶದಂತೆ ವಿಜಯಬ್ಯಾಂಕ್ ವಿಲೀನ ವಾಗುವ ನಾಳಿನ ದಿನವನ್ನು ದಕ್ಷಿಣ ಕನ್ನಡ ಜಿಲ್ಲಾಕಾಂಗ್ರೆಸ್ ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಿದೆ.

ಈ ಹಿನ್ನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದರ ಬಗ್ಗೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಯಾವುದೇ ಮಾತನ್ನಾಡುವುದಿಲ್ಲ. ಇದರ ವಿರುದ್ಧ ನಾಳೆ ಕರಾಳ ದಿನ ಆಚರಿಸುತ್ತೇವೆ ಎಂದು ಹೇಳಿದ್ದಾರೆ.