Connect with us

FILM

ಅಪ್ಪು ಹೆಸರು ಟ್ಯಾಟೂ ಹಾಕಿಸಿಕೊಂಡ ರಾಘಣ್ಣ- ಟೊಟೊ, ನುಕ್ಕಿ ಅಂದ್ರೆ ಯಾರು ಗೋತ್ತಾ?

ಬೆಂಗಳೂರು, ಮೇ 29: ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನ ಅಗಲಿ 2 ವರ್ಷಗಳಾಗಿದೆ. ಆದರೆ ಅಪ್ಪು ನೆನಪು ಮಾತ್ರ ಮಾಸಿಲ್ಲ. ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇಂದಿಗೂ ಪುನೀತ್ ಕುಟುಂಬಕ್ಕೆ ಅಪ್ಪು ಅಗಲಿಕೆಯನ್ನ ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅಪ್ಪು ಹೆಸರನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಪುನೀತ್ ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಇನ್ನು ದೊಡ್ಮನೆ ಸದಸ್ಯರಿಗೆ ಆ ನೋವು ನೂರು ಪಟ್ಟು ಹೆಚ್ಚಿದೆ. ಶಿವಣ್ಣ, ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಇದೀಗ ಸಹೋದರನ ಹೆಸರನ್ನು ಎದೆಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪು ಜೊತೆಗೆ ಅವರ ಮಕ್ಕಳಾದ ಧೃತಿ, ವಂದಿತಾ ಮುದ್ದಿನ ಹೆಸರನ್ನು ಕೂಡ ಎದೆ ಮೇಲೆ ಹಚ್ಚೆ ಹಾಕಿಸಿದ್ದಾರೆ. ಈ ಕುರಿತ ಫೋಟೋ ಎಲ್ಲೆಡೆ ಸದ್ದು ಮಾಡುತ್ತಿದೆ.

ಪುನೀತ್ ಮೇಲೆ ರಾಘಣ್ಣ ಅವರಿಗೆ ಬೆಟ್ಟದಷ್ಟು ಪ್ರೀತಿಯಿತ್ತು. ಅದರಲ್ಲೂ ರಾಘಣ್ಣ- ಅಪ್ಪು ಮಕ್ಕಳು ತುಸು ಹೆಚ್ಚಾಗಿಯೇ ಅಟ್ಯಾಚ್ ಆಗಿದ್ದರು. ರಾಘಣ್ಣ ಅವರಿಗೆ ಇಬ್ಬರು ಗಂಡು ಮಕ್ಕಳು ಇರುವ ಕಾರಣ, ಅಪ್ಪು ಮಕ್ಕಳು ಧೃತಿ- ವಂದಿತಾ ಇಬ್ಬರೂ ಹೆಣ್ಣು ಮಕ್ಕಳನ್ನ ತನ್ನ ಮಕ್ಕಳಂತೆಯೇ ಪ್ರೀತಿಸುತ್ತಾರೆ. ಅದಕ್ಕೆ ತಾಜಾ ಉದಾಹರಣೆ ರಾಘಣ್ಣ ಎದೆ ಮೇಲಿರುವ ಹಚ್ಚೆ.

ತಮಗೆ ಹಚ್ಚೆ ಹಾಕಿದ ಯುವ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್‌ಕುಮಾರ್ ಫೊಟೊ ತೆಗೆಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ, ಅವರ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ಅವರ ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಕೊಂಡಾಡಿದ್ದಾರೆ. ಅಂದಹಾಗೆ, ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ನಿಕ್ ನೇಮ್ ಆಗಿದೆ. ಇದನ್ನೇ ಅಪ್ಪು ಹೆಸರಿನ ಜೊತೆ ಹಚ್ಚೆ ಹಾಕಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *