LATEST NEWS
ದೇವಸ್ಥಾನ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ವಿವಾದ – ಕ್ಷಮೆ ಕೇಳಿದ ಟಿಕ್ ಟಾಕ್ ಸ್ಟಾರ್ ಗಳು

ಮಂಗಳೂರು ಅಗಸ್ಟ್ 28: ಮಂಗಳೂರಿನ ಹೊರವಲಯದ ಪಾವೆಂಜೆ ದೇವಸ್ಥಾನದ ಹೊರಾಂಗಣದಲ್ಲಿ ಅಸಭ್ಯ ರೀತಿಯಲ್ಲಿ ಟಿಕ್ ಟಾಕ್ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಯುವಕ ಯುವತಿಯರು ಇದೀಗ ದೇವಸ್ಥಾನಕ್ಕೆ ಆಗಮಿಸಿ ಮಾಡಿರುವ ತಪ್ಪಿಗೆ ಕ್ಷಮೆ ಕೇಳಿದ್ದಾರೆ.
ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪ್ರತೀಕ್ ಶೆಟ್ಟಿ ಎಂಬ ಯುವಕ ಹಾಗೂ ಮೂವರು ಯುವತಿಯರು ಪ್ರೇಮ ನಿವೇದನೆ ರೀತಿಯಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರ ವರ್ತನೆಗೆ ಭಕ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
