Connect with us

    FILM

    ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ತುಳುನಾಡ ಬೆಡಗಿ ಅನುಷ್ಕಾ ಶೆಟ್ಟಿ..!

    ಮಂಗಳೂರು :  ತೆಲುಗು ಹಾಗೂ ತಮಿಳು ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದ್ದ ತುಳುನಾಡ ಬೆಡಗಿ ಅನುಷ್ಕಾ ಶೆಟ್ಟಿ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.

    ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ರೋಜಿನ್ ಥಾಮಸ್ ನಿರ್ದೇಶನ ಮಾಡುತ್ತಿರುವ ಹಾರರ್ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾಕ್ಕೆ ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ’ಕಲಿಯಂಕಟ್ಟು ನೀಲಿ’ ಎಂಬ ಕೇರಳದ ಜನಪದ ಕತೆಗಳಲ್ಲಿ ಬರುವ ಯಕ್ಷಿಣಿ ಅಥವಾ ಆತ್ಮದ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ನಿರ್ದೇಶಕ ರೋಜಿನ್ ಈ ಹಿಂದೆ ‘ಹೋಮ್’ ಹೆಸರಿನ ಸುಂದರ ಮಲಯಾಳಂ ಸಿನಿಮಾ ನಿರ್ದೇಶನ ಮಾಡಿದ್ದರು.

    ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಸಿನಿಮಾವು ಒಬ್ಬ ಮಾಂತ್ರಿಕ ಹಾಗೂ ದೆವ್ವದ ನಡುವೆ ನಡೆವ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಹಾರರ್ ಸಿನಿಮಾ ಆಗಿದ್ದರೂ ಸಹ ಭರ್ಜರಿಯಾದ ಆಕ್ಷನ್ ಹಾಗೂ ಸಸ್ಪೆನ್ಸ್ ಈ ಸಿನಿಮಾದಲ್ಲಿದೆ ಎನ್ನಲಾಗುತ್ತಿದೆ. ಸಿನಿಮಾದ ಕತೆ ಹಾಗೂ ತಮ್ಮ ಪಾತ್ರಕ್ಕೆ ಇರುವ ಪ್ರಾಧಾನ್ಯತೆಯನ್ನು ಮೆಚ್ಚಿ, ಅನುಷ್ಕಾ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಲು ಓಕೆ ಎಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply