Connect with us

    FILM

    ಆರ್ಯವರ್ಧನ್ ಪಾತ್ರಕ್ಕೆ ಅನೂಪ್ ಭಂಡಾರಿ ಬರ್ತಾರ?

    ಬೆಂಗಳೂರು, ಆಗಸ್ಟ್ 23:’ಜೊತೆ ಜೊತೆಯಲಿ’ ಧಾರಾವಾಹಿಯಿಂದ ನಟ ಅನಿರುದ್ಧ್ ಹೊರಬಂದಿದ್ದು ಹಳೇ ಸುದ್ದಿ. ಆರ್ಯವರ್ಧನ್ ಪಾತ್ರವನ್ನು ಮುಂದೆ ಯಾರು ಮಾಡ್ತಾರೆ ಅನ್ನುವ ಬಿಸಿಬಿಸಿ ಚರ್ಚೆ ಈಗ ಶುರುವಾಗಿದೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕಲು ಆರೂರು ಜಗದೀಶ್ ಅಂಡ್ ಟೀಂ ಕಸರತ್ತು ಶುರು ಮಾಡಿದೆ.

    ಈಗಾಗಲೇ ಆರ್ಯವರ್ಧನ್ ಪಾತ್ರಕ್ಕೆ ಸಾಕಷ್ಟು ಹೆಸರುಗಳು ಕೇಳಿ ಬರ್ತಿದೆ. ಅದರಲ್ಲಿ ಅಚ್ಚರಿ ಅನ್ನಿಸಿದ್ದು ಮಾತ್ರ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಹೆಸರು. ಅನೂಪ್ ಭಂಡಾರಿ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಆರ್ಯವರ್ಧನ್ ಆಗಿ ನಟಿಸ್ತಾರೆ ಅನ್ನುವ ಗುಸುಗುಸು ಶುರುವಾಗಿದೆ. ಈ ವಿಚಾರ ಕೇಳಿ ಸಾಕಷ್ಟು ಜನರಿಗೆ ಅಚ್ಚರಿಯಾಗಿತ್ತು.

    ಶ್ರೀಮಂತ ಉದ್ಯಮಿ ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಬಿಟ್ಟರೆ ಜೆಕೆ, ಹರೀಶ್ ರಾಜ್, ದಿಲೀಪ್ ರಾಜ್ ಹೆಸರುಗಳು ಕೇಳಿ ಬಂದಿತ್ತು. ಇವರಲ್ಲೇ ಯಾರಾದರೂ ಒಬ್ಬರೂ ಆರ್ಯವರ್ಧನ್ ಆಗಿ ನಟಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ನಾಯಕನಿಲ್ಲದೇ ಬಹಳ ದಿನ ಕಥೆಯನ್ನು ಎಳೆಯಲು ಸಾಧ್ಯವಿಲ್ಲ. ಅನೂಪ್ ಭಂಡಾರಿ ಅವರನ್ನು ‘ಜೊತೆ ಜೊತೆಯಲಿ’ ತಂಡ ಅಪ್ರೋಚ್ ಮಾಡಿರುವುದು ನಿಜ. ಈ ಬಗ್ಗೆ ಸ್ವತ: ಅನೂಪ್ ಭಂಡಾರಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

    ನಟಿಸಲು ತಂಡದವರು ಕೇಳಿದಾಗಲೂ ಕನ್ಫ್ಯೂಸ್ ಆಗಿತ್ತು!

    “ಈ ಬಗ್ಗೆ ಅನೂಪ್ ಭಂಡಾರಿ “ಹೌದು ಅಪ್ರೋಚ್ ಮಾಡಿದ್ದರು. ಆದರೆ ನನಗೆ ಬೇರೆ ಕಮಿಟ್‌ಮೆಂಟ್‌ಗಳು ಇರುವುದರಿಂದ ನನ್ನ ಕೈಯಲ್ಲಿ ಪಾತ್ರ ಮಾಡಲು ಆಗುವುದಿಲ್ಲ ಎಂದು ಹೇಳಿದ್ದೇನೆ. ನಟಿಸುವುದಕ್ಕೆ ಒಂದಷ್ಟು ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿದೆ. ಆದರೆ ಸದ್ಯಕ್ಕೆ ಯಾವುದನ್ನು ಒಪ್ಪಿಕೊಳ್ಳುತ್ತಿಲ್ಲ. ಬಹಳ ವಿಭಿನ್ನ ಪಾತ್ರ ಸಿಕ್ಕರೆ ನೋಡೋಣ ಅಂದುಕೊಂಡಿದ್ದೇನೆ. ಆದರೆ ‘ಜೊತೆ ಜೊತೆಯಲಿ’ ಧಾರಾವಾಹಿ ಅವಕಾಶವನ್ನು ನಾನು ಯೋಚನೆ ಕೂಡ ಮಾಡಿರಲಿಲ್ಲ” ಎಂದಿದ್ದಾರೆ.

    “ನನ್ನನ್ನು ಯಾಕೆ ಅಪ್ರೋಚ್ ಮಾಡಿದರು ಎನ್ನುವುದು ಗೊತ್ತಿಲ್ಲ. ನಾನು ಕೂಡ ಕೇಳಲು ಹೋಗಲಿಲ್ಲ. ಯಾಕೆಂದರೆ ನಾನು ನಟಿಸುವ ಸಾಧ್ಯತೆ ಇದ್ದಿದ್ದರೆ ಕೇಳಬಹುದಿತ್ತು. ಯಾಕೆ, ಏನು ಎಂದು. ನಾನು ಮಾಡದೇ ಇರುವುದರಿಂದ ನಾನೇನು ಜಾಸ್ತಿ ಪ್ರಶ್ನೆಗಳನ್ನು ಕೇಳಲಿಲ್ಲ. ನಾನು ಯಾವುದೇ ಧಾರಾವಾಹಿ ನೋಡುವುದಿಲ್ಲ. ನನಗೆ ಅಷ್ಟು ಸಮಯ ಸಿಗುವುದಿಲ್ಲ. ನನಗೆ ಸದ್ಯ ರಿಲೀಸ್ ಆಗುತ್ತಿರುವ ಸಿನಿಮಾಗಳನ್ನು ನೋಡಲು ಸಮಯ ಸಿಗುತ್ತಿಲ್ಲ. ಅನಿರುದ್ಧ್‌ ಅವರು ಈ ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿರೋದು ಗೊತ್ತು ಅಷ್ಟೇ. ಆದರೆ ಅವರು ಧಾರಾವಾಹಿಯಿಂದ ಹೊರಗೆ ಬಂದ ವಿಚಾರ ಗೊತ್ತಿರಲಿಲ್ಲ. ನನ್ನನ್ನು ನಟಿಸಲು ತಂಡದವರು ಕೇಳಿದಾಗಲೂ ಕನ್ಫ್ಯೂಸ್ ಆಗಿತ್ತು” ಎಂದು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *