Connect with us

    KARNATAKA

    ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ

    ಬೆಂಗಳೂರು ಅಕ್ಟೋಬರ್ 30: ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಮುಂದಿನ ವರ್ಷ ಒಳ್ಳೆ ಹುಡುಗ ಸಿಕ್ಕರೆ ಮದುವೆ ಗ್ಯಾರಂಟಿ ಎಂದಿದ್ದಾರೆ.


    ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆ್ಯಂಕರ್ ಅಕುಲ್ ಅವರು ಅನುಶ್ರೀ ಅವರ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತನಾಡಿದ ಅನುಶ್ರೀ ಎಲ್ಲ ಹುಡಿಗಿಯರಂತೆ ನನಗೂ ಮದುವೆ ಆಗಬೇಕು ಎಂದಿದೆ. ನನಗೂ ಬಾಳ ಸಂಗಾತಿ ಬೇಕು ಎಂದಿದೆ. ಎಲ್ಲದಕ್ಕೂ ಸಮಯ ಬರಬೇಕು. ಸರಿಯಾದ ಟೈಮ್ ಅಲ್ಲಿ ಸರಿಯಾದ ವ್ಯಕ್ತಿ ಬರಬೇಕು. ನಾನು ಮದುವೆ ಆಗಬೇಕು ಎಂದು ಮನಸ್ಸು ಮಾಡಬೇಕಿತ್ತು. ಈವರೆಗೆ ಮಾಡಿರಲಿಲ್ಲ. ಈಗ ಮಾಡಿದ್ದೇನೆ. ಮುಂದಿನ ವರ್ಷ ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ. ಆ ವ್ಯಕ್ತಿ ಬರಲಿ ಎಂದು ಕಾಯುತ್ತೇನೆ. ಬಂದರೆ ನಾನು ಅವರನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ’ ಎಂದರು ಅವರು.


    ಅನುಶ್ರೀ ಅವರು ಲವ್ ಮ್ಯಾರೇಜ್ ಆಗ್ತಾರಾ ಅಥವಾ ಅವರದ್ದು ಅರೇಂಜ್ ಮ್ಯಾರೇಜ್ ಎಂಬ ಪ್ರಶ್ನೆ ಮೂಡಿದೆ. ಈ ವಿಚಾರ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಅವರು ಆ್ಯಂಕರಿಂಗ್ ಜೊತೆ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು ಅಲ್ಲಿ ಅನೇಕ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *