LATEST NEWS
ಮೌಢ್ಯ ನಿಷೇಧ ಮಸೂದೆ ತುಳುನಾಡಿನ ಭೂತ ಕೊಲಗಳಿಗೆ ಸಮಸ್ಯೆ – ಪಾಲೇಮಾರ್
ಮೌಢ್ಯ ನಿಷೇಧ ಮಸೂದೆ ತುಳುನಾಡಿನ ಭೂತ ಕೊಲಗಳಿಗೆ ಸಮಸ್ಯೆ – ಪಾಲೇಮಾರ್
ಮಂಗಳೂರು ಸೆಪ್ಟೆಂಬರ್ 28: ಮೂಢನಂಬಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕರ್ನಾಟಕ ಅಮಾನವೀಯ ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನೆ ಮಸೂದೆ 2017 ಯನ್ನು ಹಿಂದೂ ಸಮಾಜವನ್ನು ಗುರಿಯಾಗಿಸಿ ಕಾಯ್ದೆ ರಚಿಸಲಾಗಿದೆ. ಈ ಮಸೂದೆ ತುಳುನಾಡಿನ ಭೂತ ಕೋಲಗಳಿಗೂ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು ಯಾವುದೇ ಕಾಯ್ದೆ ಸಾರ್ವತ್ರಿಕ ವಾಗಿರಬೇಕೇ ಹೊರತು ಪಕ್ಷಪಾತದಿಂದ ಕೂಡಿರಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಯ್ದೆಯಲ್ಲಿ ಹಲವು ಲೋಪದೋಷಗಳಿದ್ದು ಹಿಂದೂ ಸಮಾಜವನ್ನು ಗುರಿಯಾಗಿಸಿ ಕಾಯ್ದೆ ರಚಿಸಲಾಗಿದೆ ಎಂದು ಅವರು ಕಿಡಿಕಾರಿದರು.
ಮೂಢನಂಬಿಕೆಯನ್ನು ನಿಷೇಧಿಸಿ ಆದರೆ ಮೂಲ ನಂಬಿಕೆಗೆ ತೊಂದರೆ ನೀಡಬಾರದೆಂದು ಅವರು ಅಭಿಪ್ರಾಯಪಟ್ಟರು. ಎಡೆಸ್ನಾನ ಹಾಗೂ ಮಡೆಸ್ನಾನವನ್ನು ಗುರಿಯಾಗಿಸಿ ಈ ವಿಧೇಯಕ ರಚಿಸಲಾಗಿದೆ ಎಂದು ಹೇಳಿದ ಅವರು ಕೋಳಿ ಅಂಕವನ್ನು ನಿಷೇಧಿಸಿ ಆದರೆ ಕಂಬಳಕ್ಕೂ ಅಡ್ಡಗಾಲು ಹಾಕುತ್ತಿದ್ದಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಅನುಮೋದಿಸಿದ “ಕರ್ನಾಟಕ ಅಮಾನವೀಯ ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನೆ ಮಸೂದೆ “, ತುಳುನಾಡಿನ ಭೂತ ಕೋಲಗಳಿಗೂ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.