DAKSHINA KANNADA
ನೈತಿಕ ಪೊಲೀಸ್ ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಮಂಗಳೂರು, ಜೂನ್ 06: ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ನಗರದಲ್ಲಿ ನೈತಿಕ ಪೊಲೀಸ್ ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ನ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಕೋಮು ಸೌಹಾರ್ದತೆ ಸಮಸ್ಯೆ ಬರುವಲ್ಲಿ ಮಾಡ್ತೇವೆ, ಇರೋ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಬಳಸಿ ಮಾಡ್ತೇವೆ, ಅದರ ಸ್ವರೂಪದ ಬಗ್ಗೆ ಕಮಿಷನರ್ ಸಿದ್ದತೆ ಮಾಡ್ತಾರೆ, ಸದ್ಯ ನಮ್ಮ ರಾಜ್ಯದಲ್ಲಿ ಈ ವಿಂಗ್ ಇಲ್ಲ, ಇದೇ ಮೊದಲು, ಸೈಬರ್ ಕ್ರೈಂ, ಕ್ರಿಮಿನಲ್ ಚಟುವಟಿಕೆಗಳ ಜೊತೆಗೆ ಇರುತ್ತೆ.

ಮುಖ್ಯವಾಗಿ ನೈತಿಕ ಪೊಲೀಸ್ ಗಿರಿ ಮಟ್ಟ ಹಾಕಲು ಈ ವಿಂಗ್ ಸ್ಥಾಪಿಸ್ತಾ ಇದೀವಿ, ಇಲ್ಲಿ ಹೆಚ್ಚು ನೈತಿಕ ಪೊಲೀಸ್ ಗಿರಿ ನಡೆಯೋ ಕಾರಣಕ್ಕೆ ವಿಂಗ್ ಮಾಡ್ತಾ ಇದೀವಿ. ಈ ವಿಂಗ್ ಜನರಿಗೆ ತಿಳಿ ಹೇಳಲಿದೆ, ಅದರ ಜೊತೆ ಕಾನೂನು ಪ್ರಕಾರ ಕ್ರಮ ತೆಗೆದು ಕೊಳ್ಳಲಿದೆ.
ಕೆಲವರನ್ನು ಗಡೀಪಾರು ಮಾಡಿದ್ದೇವೆ, ನೈತಿಕ ಪೊಲೀಸ್ ಗಿರಿ ಮಾಡಿದವರ ವಿರುದ್ದವೂ ಇಂಥ ಕ್ರಮಗಳ ಬಗ್ಗೆ ನೋಡ್ತೇವೆ. ಈ ವಿಂಗ್ ಮೂಲಕ ಕೃತ್ಯಗಳ ಬಗ್ಗೆ ಫೋಕಸ್ ಮಾಡ್ತೇನೆ. ನಮ್ಮ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಅಂತ ಕುವೆಂಪು ಪದ ಉಚ್ಛರಿಸಿದ್ದೆವು ಅದರಂತೆ ನಮಗೆ ಶಾಂತಿ ಬೇಕು, ಸೌಹಾರ್ದತೆ ಬೇಕು, ಇಷ್ಟ ಬಂದ ಹಾಗೆ ಮಾತನಾಡಿದ್ರೆ, ಪ್ರಚೋದನೆ ಭಾಷಣ ಮಾಡಿದ್ರೆ ಅದಕ್ಕೂ ಕಾನೂನು ಇದೆ.
ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಬಗ್ಗೆ ಆಗಾಗ್ಗೆ ಪರಿಶೀಲನೆ ಮಾಡ್ತೀವಿ, ರಿಜಿಸ್ಟರ್ ಆದ ಕೇಸ್ ಗಳ ಬಗ್ಗೆ ಹಿರಿಯ ಅಧಿಕಾರಿಗಳೇ ಜವಾಬ್ದಾರಿ ಆಗಿರ್ತಾರೆ. ಆ್ಯಂಟಿ ಕಮ್ಯುನಲ್ ವಿಂಗ್ ನಲ್ಲಿ ಪೊಲೀಸರಷ್ಟೇ ಇರ್ತಾರೆ, ಕೋಮು ಹತ್ಯೆಗಳು ಸದ್ಯ ಕೋರ್ಟ್ ನಲ್ಲಿದೆ, ಹೀಗಾಗಿ ಕಾನೂನು ನೋಡಿಕೊಳ್ಳಲಿದೆ.
ಕೋರ್ಟ್ ಒಂದು ವೇಳೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಹೇಳಿದ್ರೆ ನಾವು ಕ್ರಮ ತೆಗೋತಿವಿ. ಯಾವ ಕೇಸ್ ನಲ್ಲಿ ಮರು ತನಿಖೆ ಆಗಬೇಕು ಅಂತ ಇದೆ ಅದನ್ನ ನೋಡುವ, ಆದರೆ ಕೋರ್ಟ್ ನಿರ್ದೇಶನದಂತೆ ನಾವು ಕೆಲಸ ಮಾಡ್ತೇವೆ.
ಪುತ್ತೂರಿಗೆ ಎಸ್ಪಿ ಕಚೇರಿ ವರ್ಗಾವಣೆ ಬಗ್ಗೆ ಪರಿಶೀಲನೆ ಮಾಡ್ತೇನೆ, ಪಶ್ಚಿಮ ವಲಯದ ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಪ್ರಗತಿ ಪರಿಶೀಲನೆ ಮಾಡಿ ಇಲಾಖೆಯ ಸವಾಲುಗಳು, ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೇನೆ. ಇದು ನನಗೆ ಹೊಸತಲ್ಲ, ನಾನು ಮೂರನೇ ಬಾರಿಗೆ ಗೃಹ ಸಚಿವನಾಗಿದ್ದೇನೆ.
ಆದರೂ ಹೊಸ ಹೊಸ ಸವಾಲುಗಳಿವೆ, ಸಮಾಜದಲ್ಲಿ ಬದಲಾವಣೆ ಆಗಿದೆ. ಈ ಭಾಗದಲ್ಲಿ ಬಹಳ ಒಳ್ಳೆಯ ಜನ, ಬುದ್ದಿವಂತ ಹಾಗೂ ಶ್ರಮ ಜೀವಿಗಳು ಇದಾರೆ ಅಂತ ನಾವು ಅಂದುಕೊಳ್ತೇವೆ. ಅದರ ಜೊತೆಗೆ ಒಂದೆರಡು ಬೇರೆ ಬೇರೆ ರೀತಿಯ ಮಾತುಗಳೂ ಇವೆ. ಈ ಭಾಗದಲ್ಲಿ ಕೋಮು ಸೌಹಾರ್ದತೆ ಇಲ್ಲ, ಶಾಂತಿ ಇಲ್ಲ ಎಂಬ ಭಾವನೆಯೂ ಇದೆ. ನಾನು ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದ ವೇಳೆಯೂ ಇಲ್ಲಿನ ಜನ ಶಾಂತಿ ಕೊಡಿ ಅಂದಿದ್ದರು.
ಕೆಪಿಸಿಸಿ ಅಧ್ಯಕ್ಷನಾಗಿದ್ದಗಲೂ ಉಳ್ಳಾಲ ಮತ್ತು ಉಡುಪಿವರೆಗೆ ಪಾದಯಾತ್ರೆ ಮಾಡಿದ್ದೆ, ಇವತ್ತು ಇಲ್ಲಿ ಭಯದ ವಾತಾವರಣದಿಂದ ಜನ ಜೀವನ ಮಾಡೋ ಮಟ್ಟಕ್ಕೆ ಹೋಗಿದೆ ಅಂತ ಜನ ಮಾತನಾಡ್ತಿದಾರೆ. ಇವತ್ತು ನಾನು ಪ್ರಾಮುಖ್ಯವಾದ ಕೋಮು ಸೌಹಾರ್ದತೆ ತರಲು ಕಠಿಣ ಸೂಚನೆ ಕೊಟ್ಟಿದ್ದೇನೆ.
ಇಲ್ಲಿ ಮೋರಲ್ ಪಾಲಿಸಿಂಗ್ ನಡೀತಿದೆ, ಯಾರು ಈ ಮಾರಲ್ ಪಾಲಿಸಿಂಗ್ ಮಾಡೋದು, ಪೊಲೀಸ್ ಇಲಾಖೆ ಇದ್ದರೂ ನಾವು ಇದನ್ನ ತಡೆಯದೇ ಹೋದ್ರೆ ಇಡೀ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನೈತಿಕ ಪೊಲೀಸ್ ಗಿರಿ ನಡೆಯಲು ಬಿಡಬಾರದು ಅಂತ ಪೊಲೀಸರಿಗೆ ಕಠಿಣ ಸೂಚನೆ ಕೊಟ್ಟಿದ್ದೇನೆ.
ಆಂಟಿ ಕಮ್ಯುನಲ್ ವಿಂಗ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಾರಂಭ ಮಾಡ್ತೇವೆ. ಒಬ್ಬ ಸಮರ್ಥ ಅಧಿಕಾರಿಯನ್ನ ಕಮಿಷನರ್ ಅದಕ್ಕೆ ನೇಮಿಸ್ತಾರೆ. ಮುಂದಿನ ದಿನಗಳಲ್ಲಿ ಈ ವಿಂಗ್ ಕಾರ್ಯಾಚರಣೆ ಮಾಡಲಿದೆ. ಡ್ರಗ್ಸ್ ದಂಧೆ ಇಲ್ಲಿ ಮಿತಿ ಮೀರಿದೆ, ಯುವಕರಲ್ಲಿ ಜಾಸ್ತಿ ಆಗಿದೆ.
ಇದನ್ನ ಮಟ್ಟ ಹಾಕಲು ಜಾಗೃತಿ ಕಾರ್ಯಕ್ರಮ ಮಾಡಲು ಸೂಚಿಸಿದ್ದೇನೆ. ಅಗಸ್ಟ್ 15 ರ ಒಳಗಾಗಿ ಈ ಭಾಗದಲ್ಲಿ ಯಾವುದೇ ಡ್ರಗ್ಸ್ ಸಿಗಬಾರದು. ಪೆಡ್ಲರ್ಸ್, ಬಳಕೆ ಮಾಡೋರ ವಿರುದ್ದ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ. ನಮ್ಮ ಅಧಿಕಾರಿಗಳು ಅದನ್ನ ಮಾಡ್ತಾರೆ ಅನ್ನೋ ವಿಶ್ವಾಸ ಇದೆ. ಕಾನೂನನ್ನ ಕೈಗೆತ್ತಿಕೊಳ್ಳೋ ಎಷ್ಟೇ ದೊಡ್ಡವರನ್ನೂ ಪೊಲೀಸ್ ಇಲಾಖೆ ಸುಮ್ಮನೆ ಬಿಡಲ್ಲ
ಆರೇಳು ಕೊಲೆಗಳಾದಾಗ ಅದಕ್ಕೆ ಪರಿಹಾರ ಕೊಡಲಿಲ್ಲ ಅನ್ನೋ ಕೂಗು ಇದೆ. ಫಾಜಿಲ್, ದೀಪಕ್ ರಾವ್, ಜಲೀಲ್ , ಮಸೂದ್ ಸೇರಿ ಕೆಲವು ಪ್ರಕರಣಗಳು ಇದೆ.ಅದರ ಪ್ರಸ್ತಾವನೆಯನ್ನು ತಕ್ಷಣ ಸರ್ಕಾರಕ್ಕೆ ಕಳುಹಿಸಿ ಕೊಡ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.