DAKSHINA KANNADA
ಶ್ರೀನಿವಾಸ್ ತಿಮ್ಮಯ್ಯ ಸಾರಥ್ಯದ ಮತ್ತೊಂದು ಸೂಪರ್ ಹಿಟ್ ಚಲನಚಿತ್ರ “ವರ್ಣವೇದಂ”..!

ಮಾನವ ಮತ್ತು ಪ್ರಾಣಿ ನಡುವಿನ ಅಧ್ಭುತ ಸುಮಧುರ ಭಾಂಧವ್ಯದ ಯಶಸ್ವಿ ಚಲನ ಚಿತ್ರ “ನಾನು ಮತ್ತು ಗುಂಡ” ಚಿತ್ರದ ನಿರ್ದೇಶಕರಾದ ಶ್ರೀನಿವಾಸ್ ತಿಮ್ಮಯ್ಯ ಅವರು ಮತ್ತೊಂದು ಹಿಟ್ ಚಲನ ಚಿತ್ರ ನೀಡಲು ಸಜ್ಜಾಗಿದ್ದಾರೆ.
ಬೆಂಗಳೂರು : ಮಾನವ ಮತ್ತು ಪ್ರಾಣಿ ನಡುವಿನ ಅಧ್ಭುತ ಸುಮಧುರ ಭಾಂಧವ್ಯದ ಯಶಸ್ವಿ ಚಲನ ಚಿತ್ರ “ನಾನು ಮತ್ತು ಗುಂಡ” ಚಿತ್ರದ ನಿರ್ದೇಶಕರಾದ ಶ್ರೀನಿವಾಸ್ ತಿಮ್ಮಯ್ಯ ಅವರು ಮತ್ತೊಂದು ಹಿಟ್ ಚಲನ ಚಿತ್ರ ನೀಡಲು ಸಜ್ಜಾಗಿದ್ದಾರೆ.

“ವರ್ಣವೇದಂ” ಹೆಸರಿನ ಈ ಚಲನ ಚಿತ್ರದ ಟೈಟಲ್ ಕೂಡ ಸಕತ್ ಇದ್ದು ಸಾಕಷ್ಟು ಕುತೂಹಲ ಮೂಡಿಸುವಂತಿದೆ.
‘ವರ್ಣವೇದಂ’ ಹೆಸರಿಸುವಂತೆಯೇ ಚಿತ್ರ ಒಂದು ಸುಂದರವಾದ ಯುವ ಹೃದಯವನ್ನು ಬೆಚ್ಚಗಾಗಿಸುವ ಪ್ರೇಮಕಥೆ, ಸಸ್ಪೆನ್ಸ್, ಕುಟುಂಬ ಮನರಂಜನೆಯೊಂದಿಗೆ ತುಂಬಿದೆ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿತೋರಿಸುತ್ತೆ.
“ವರ್ಣ” ಎಂಬ ಪದವು “ಬಣ್ಣ” ಮತ್ತು “ವೇದಂ” ಎಂಬ ಪದವು “ನೀತಿಗಳು / ತತ್ವಗಳು” ಎಂಬರ್ಥದಲ್ಲಿದ್ದು , “ವರ್ಣವೇದಂ” ಆಗಿದೆ.
ಚಿತ್ರದ ನಾಯಕಿಯ ಪಾತ್ರದ ಹೆಸರು”ವರ್ಣ” ಮತ್ತು ನಾಯಕನ ಪಾತ್ರದ ಹೆಸರು “ವೇದ” … “ವರ್ಣ” ಮತ್ತು “ವೇದ” ಹೇಗೆ ಮಧ್ಯೆ ಹೇಗೆ ಪ್ರೀತಿ ಅರಳುತ್ತೆ , ಪ್ರೀತಿ, ಜೀವನ ಮತ್ತು ಪ್ರಕೃತಿಯ ಸಮ್ಮಿಳಿತದಲ್ಲಿ ಈ ಚಿತ್ರ ಅದ್ಧುತವಾಗಿ ಮೂಡಿ ಬರುವ ವಿಶ್ವಾಸವನ್ನು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ಮಾಪಕರು, ನಿರ್ದೇಶಕರೂ ಆಗಿರುವ ಶ್ರೀನಿವಾಸ್ ತಿಮ್ಮಯ್ಯ ವ್ಯಕ್ತಪಡಿಸುತ್ತಾರೆ.
ಯಶಸ್ವಿ ಮತ್ತು ಅನುಭವಿ ಕ್ರೀಯಾಶೀಲ ನಿರ್ದೇಶಕರಾಗಿರುವ ಶ್ರೀನಿವಾಸ್ ತಿಮ್ಮಯ್ಯರ ‘ನಾನು ಮಾತು ಗುಂಡ’ ಜನವರಿ 24, 2020 ರಂದು ಬಿಡುಗಡೆಯಾಗಿ ಸ್ಯಾಂಡಲ್‌ವುಡ್‌ನಲ್ಲಿ 2020 ರ ಮೊದಲ ಹಿಟ್ ಚಲನಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ಸದಾ ಪ್ರೇಕ್ಷಕರಿಗೆ ಏನನ್ನಾದರೂ ಹೊಸತು ನೀಡಬೇಕೆಂಬ ಮನೋ ಇಚ್ಚೆಯ ಶ್ರೀನಿವಾಸ್ ಪ್ರಯೋಗ ಶೀಲತೆಯ ನಿರ್ದೇಶಕರೂ ಹೌದು.
ಈ ಬಾರಿಯೂ ‘ವರ್ಣವೇದಂ’ ನಲ್ಲೂ ಅನೇಕ ಹೊಸತನಗಳನ್ನು ನೀಡಲಿದ್ದಾರೆ..!