LATEST NEWS
ಜಿಲ್ಲೆಯಲ್ಲಿ ನಿರಂತರವಾಗಿ ಸಾವಿಗೀಡಾಗುತ್ತಿರುವ ಎಂಡೋಸಂತ್ರಸ್ತರು

ಜಿಲ್ಲೆಯಲ್ಲಿ ನಿರಂತರವಾಗಿ ಸಾವಿಗೀಡಾಗುತ್ತಿರುವ ಎಂಡೋಸಂತ್ರಸ್ತರು
ಪುತ್ತೂರು ಸೆಪ್ಟೆಂಬರ್ 26: ಎಂಡೋ ಸಲ್ಫಾನ್ ಸಂಬಂಧಿಸಿದ ಕಾಯಿಲೆಯಿಂದ ಬಳುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಎಂಡೋ ಸಂತ್ರಸ್ತರು ಸಾವಿಗೀಡಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಸರಣಿಗೆ ಮತ್ತೊಂದು ಸಾವು ಸೇರ್ಪಡೆಯಾಗಿದೆ.

ಮೃತರು ಕೊಕ್ಕಡದ ಪುನ್ಚೊತ್ತಿಮಾರ್ ನಿವಾಸಿ ಕೃಷ್ಣಪ್ಪ ಗೌಡ (56) ಎಂದು ಗುರುತಿಸಲಾಗಿದೆ. ಇವರು ಎಂಡೋಸಲ್ಫಾನ್ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.