LATEST NEWS
ದಕ್ಷಿಣಕನ್ನಡದಲ್ಲಿ ದುಬೈನಿಂದ ಬಂದ ಯುವಕನಿಗೆ ಕೊರೊನಾ ಪಾಸಿಟಿವ್
ದಕ್ಷಿಣಕನ್ನಡದಲ್ಲಿ ದುಬೈನಿಂದ ಬಂದ ಯುವಕನಿಗೆ ಕೊರೊನಾ ಪಾಸಿಟಿವ್
ಪುತ್ತೂರು ಮಾರ್ಚ್ 31: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ವರದಿಯಾಗಿದೆ. ಸುಳ್ಯ ನಿವಾಸಿಯಾಗಿರುವ 32 ವರ್ಷದ ಯುವಕನಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ.
ಈತನ ಟ್ರಾವೆಲ್ ಹಿಸ್ಟರಿ ಪ್ರಕಾರ ಈತ ಮಾರ್ಚ್ 18 ರಂದು ದುಬೈನಿಂದ ಊರಿಗೆ ಬಂದಿದ್ದು , ಸುಳ್ಯ ಸರಕಾರಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ದಾಖಲಾಗಿದ್ದ. ಈತನ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಗಳಿಂದ ಇತನಿಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನಲೆಯಲ್ಲಿ ಯುವಕನ್ನು ಸುಳ್ಯದಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.