LATEST NEWS
ಮಂಗಳೂರು ಇಂದು ಮತ್ತೆ ಎರಡು ಕೊರೊನಾ ಪ್ರಕರಣ ಪತ್ತೆ

ಮಂಗಳೂರು ಇಂದು ಮತ್ತೆ ಎರಡು ಕೊರೊನಾ ಪ್ರಕರಣ ಪತ್ತೆ
ಮಂಗಳೂರು ಮೇ.18:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
30 ವರ್ಷದ ಯುವಕ ಹಾಗೂ 55 ವರ್ಷದ ಮಹಿಳೆಯಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ನಿವಾಸಿ 30 ವರ್ಷದ ಯುವಕ ರಾಯಗಡದಿಂದ ಮಂಗಳೂರಿಗೆ ಆಗಮಿಸಿ ಕ್ವಾರಂಟೈನ್ ನಲ್ಲಿದ್ದರು.

ಮಂಗಳೂರಿನ ಯೆಯ್ಯಾಡಿ ನಿವಾಸಿ ಮಹಿಳೆ ಜ್ವರದಿಂದ ಕೋವಿಡ್ ಆಸ್ಪತ್ರೆಗೆ ಬಂದಾಗ ಸೋಂಕು ಪತ್ತೆಯಾಗಿದೆ. ಸದ್ಯ ಮಹಿಳೆಗೆ ಕೋವಿಡ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.