DAKSHINA KANNADA
‘ತಿಗಲೆ ಇತ್ತಿನಾಯಗ್ ತಿಬಾರ್’ ಖ್ಯಾತಿಯ ಶಿಬರೂರು ದೇವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ..!
ಕಿನ್ನಿಗೋಳಿ : ತಿಗಲೆ ಇತ್ತಿನಾಯಗ್ ತಿಬಾರ್ ಖ್ಯಾತಿಯ ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ದೇವಸ್ಥಾನದ ವಾರ್ಷಿಕ ನೆಮೋತ್ಸವ ತಿಬರಾಯನ ಭಾನುವಾರ ನಡೆಯಿತು.
ಬೆಳ್ಳಿಗ್ಗೆ ತುಲಾಬಾರ ಸೇವೆ, ಉಳ್ಳಾಯ ದೈವದ ನೆಮೋತ್ಸವ ಕಂಚಿಲು ಸೇವೆ, ಉರುಳು ಸೇವೆಗಳು ನಡೆದವು ಮದ್ಯಾಹ್ನ ಅನ್ನಸಂತರ್ಪಣೆ ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಬಂಡಿ ಉತ್ಸವ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಈ ಸಂದರ್ಭ ಸಾವಿರಾರು ಮಂದಿ ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಭಾನುವಾರ ರಜಾ ದಿನವಾದ ಕಾರಣ ಕ್ಷೇತ್ರಕ್ಕೆ ಸಾವಿರಾರು ಜನ ಭಕ್ತರು ಭೇಟಿ ನೀಡಿದರು, ಮದ್ಯಾಹ್ನ ಸುಮಾರು ೧೧.೩೦ಕ್ಕೆ ಅನ್ನಸಂತರ್ಪಣೆ ಪ್ರಾರಂಭವಾಗಿದ್ದು, ತಡ ರಾತ್ರಿ ವರೆಗೆ, ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ವಿಷ ಜಂತುಗಳು ಕಚ್ಚಿದಾಗ ಇಲ್ಲಿನ ತೀರ್ಥ ಮತ್ತು ಮಣ್ಣು ಪ್ರಸಾದ ಎಂಬ ನಂಬಿಕೆಯಂತೆ, ಭಕ್ತರು ತೀರ್ಥ ಮತ್ತು ಮಣ್ನು ಪ್ರಸಾದ ತೆಗೆದುಕೊಂಡು ಹೋಗುತ್ತಿದ್ದರು, ಒಟ್ಟು ಏಳು ದಿನಗಳ ಜಾತ್ರಾಮಹೋತ್ಸವದಲ್ಲಿ ಪ್ರತೀ ದಿನ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.