DAKSHINA KANNADA
ದೇಶದಲ್ಲಿ 11 ಕೋಟಿ ಟಾಯ್ಲೆಟ್ ಇದೆ ಆದರೂ ಕಾಂಗ್ರೆಸ್ ನವರು ಈಗಲೂ ಚೊಂಬು ಹಿಡಿದು ಯಾಕೆ ಹೋಗುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ- ಅಣ್ಣಾಮಲೈ

ಪುತ್ತೂರು ಎಪ್ರಿಲ್ 23: ಕೇಂದ್ರ ಸರಕಾರ ದೇಶದಲ್ಲಿ 11 ಕೋಟಿ ಟಾಯ್ಲೆಟ್ ನಿರ್ಮಾಣ ಮಾಡಿದ ಆದರೂ ಕಾಂಗ್ರೆಸ್ ನವರು ಈಗಲೂ ಚೊಂಬು ಹಿಡಿದು ಯಾಕೆ ಹೋಗುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದು ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.
ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ನವರಿಂದ ಚೊಂಬು ಪ್ರದರ್ಶನ ನಡೀತಾ ಇದೆ. ಕೇಂದ್ರ ಸರ್ಕಾರ ದೇಶದಲ್ಲಿ 11 ಕೋಟಿ ಟಾಯ್ಲೆಟ್ ನಿರ್ಮಿಸಿಕೊಟ್ಟಿದೆ. ಆದರೂ ಕಾಂಗ್ರೆಸ್ ನವರು ಈಗಲೂ ಚೊಂಬು ಹಿಡಿದು ಯಾಕೆ ಹೋಗುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದರು. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಘೋಷಿಸುತ್ತಿದೆ. ಆದ್ರೆ ಕಾಂಗ್ರೆಸ್ ಪಕ್ಷಕ್ಕೇ ವ್ಯಾರಂಟಿ ಇಲ್ಲ, ವ್ಯಾರಂಟಿ ಇಲ್ಲದೆ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಘೋಷಿಸುತ್ತಿದೆ. ಮೋದಿಯ ಗ್ಯಾರಂಟಿಯ ಮುಂದೆ ಯಾವ ಗ್ಯಾರಂಟಿಯೂ ಇಲ್ಲ. ಮುಂದಿನ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನವರು ಹಲವು ನಾಟಕಗಳನ್ನ ಮಾಡಲಿದ್ದಾರೆ. ಆ ಕಾರಣ ನಾವೆಲ್ಲ ಜಾಗ್ರತೆಯಿಂದ ಇರಬೇಕು ಎಂದು ಕಾಂಗ್ರೆಸ್ ವಿರುದ್ಧ ಕೆ.ಅಣ್ಣಾಮಲೈ ವಾಗ್ದಾಳಿ ನಡೆಸಿದರು.
