Connect with us

    FILM

    ಅನಿಮಲ್​: ಚಿತ್ರದಲ್ಲಿ ಪೂರ್ತಿ ಬೆತ್ತಲಾಗಿದ್ದಕ್ಕೆ ತೃಪ್ತಿಗೆ ಸಿಕ್ಕ ಸಂಭಾವನೆ ಇಷ್ಟೇನಾ? ರಶ್ಮಿಕಾ ಪಡೆದ ಹಣವೆಷ್ಟು?

    ಮುಂಬೈ, ಡಿಸೆಂಬರ್ 15: ರಣಬೀರ್​ ಕಪೂರ್​ ಅಭಿನಯದ, ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ “ಅನಿಮಲ್”​ ಸಿನಿಮಾ 500 ಕೋಟಿ ರೂ.ಗೂ ಅಧಿಕ ಗಳಿಕೆಯೊಂದಿಗೆ ಬಾಕ್ಸ್​​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಈ ಸಿನಿಮಾದ ಪ್ರತಿ ಪಾತ್ರಗಳು ಕೂಡ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ನಟಿ ತೃಪ್ತಿ ದಿಮ್ರಿ ಅವರ ನಗ್ನ ದೃಶ್ಯ ಟಾಕ್​ ಆಫ್​ ದಿ ಟೌನ್ ಆಗಿದೆ.

    ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಹಲವು ಇಂಟಿಮೇಟ್ ದೃಶ್ಯಗಳಲ್ಲಿ ತೃಪ್ತಿ ದಿಮ್ರಿ ನಟಿಸಿದ್ದಾರೆ. ಸಂಪೂರ್ಣ ಬೆತ್ತಲಾಗಿದ್ದು, ಆಕೆಯ ಬೋಲ್ಡ್ ದೃಶ್ಯಗಳ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಂದಹಾಗೆ ಅನಿಮಲ್ ಚಿತ್ರದ ನಂತರ ತೃಪ್ತಿ ಅವರ ಫ್ಯಾನ್ ಫಾಲೋಯಿಂಗ್ ಕೂಡ ಬಹಳಷ್ಟು ಹೆಚ್ಚಾಗಿದೆ.

    ಮಾಮ್​, ಪೋಸ್ಟರ್​ ಬಾಯ್​, ಲೈಲಾ ಮಜ್ನು ಸೇರಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದರೂ ಅನಿಮಲ್​ ಸಿನಿಮಾದ ಯಶಸ್ಸು ತೃಪ್ತಿ ದಿಮ್ರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿದೆ. ಈ ಸಿನಿಮಾದಲ್ಲಿ ಬೆತ್ತಲಾಗಲು ದಿಮ್ರಿ ಪಡೆದುಕೊಂಡ ಸಂಭಾವನೆ ಎಷ್ಟಿರಬಹುದು ಎಂಬ ಪ್ರಶ್ನೆಗಳು ಸಹ ಕೇಳಿಬರುತ್ತಿವೆ. ಜೊಯಾ ಹೆಸರಿನ ತಮ್ಮ ಬೋಲ್ಡ್​ ಪಾತ್ರಕ್ಕೆ ದಿಮ್ರಿ ತುಂಬಾ ಕಡಿಮೆ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

    ಸಿನಿ ಮೂಲಗಳ ಪ್ರಕಾರ ದಿಮ್ರಿ ಕೇವಲ 40 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದೀಗ ಆಕೆ ಪಡೆದಿರುವ ಕಡಿಮೆ ಸಂಭಾವನೆ ಮೊತ್ತ ಕೇಳಿ ಅನೇಕರು ಹುಬ್ಬೇರಿಸಿದ್ದಾರೆ. ಇಷ್ಟೊಂದು ಬೋಲ್ಡ್​ ಆಗಿ ನಟಿಸಿದರೂ ದಿಮ್ರಿಗೆ ಸಿಕ್ಕ ಸಂಭಾವನೆ ಇಷ್ಟೇನಾ ಎನ್ನುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸಂಭಾವನೆಗೆ ಹೋಲಿಕೆ ಮಾಡಿದರೆ, ದಿಮ್ರಿ ಪಡೆದಿರುವ ಸಂಭಾವನೆ ಹತ್ತನೇ ಒಂದು ಭಾಗದಷ್ಟಿದೆ.

    ಹಾಗಾದರೆ, ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಅಂತಾ ನೋಡುವುದಾರೆ ಬರೋಬ್ಬರಿ 4 ಕೋಟಿ ರೂ. ಪಡೆದಿದ್ದಾರೆ. ರಣಬೀರ್​​ ಕಪೂರ್​ 70 ಕೋಟಿ ರೂ., ಬಾಬಿ ಡಿಯೋಲ್​ 4 ಕೋಟಿ ರೂ. ಮತ್ತು ಅನಿಲ್​ ಕಪೂರ್​ 2 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಅನಿಮಲ್​ ಚಿತ್ರ ಬಿಡುಗಡೆಯಾದ ನಂತರ, ತೃಪ್ತಿ ದಿಮ್ರಿ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 30 ಲಕ್ಷದಷ್ಟು ಹೆಚ್ಚಾಗಿದೆ. ಅನಿಮಲ್ ಬಿಡುಗಡೆಗೂ ಮುನ್ನ 6 ಲಕ್ಷದಷ್ಟಿದ್ದ ಫಾಲೋವರ್ಸ್ ಡಿಸೆಂಬರ್ 14ಕ್ಕೆ 37 ಲಕ್ಷ ತಲುಪಿರುವುದು ದಾಖಲೆಯೇ ಸರಿ. IMDb ಬಿಡುಗಡೆ ಮಾಡಿದ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ತೃಪ್ತಿ ದಿಮ್ರಿ ಕೂಡ ಅಗ್ರಸ್ಥಾನದಲ್ಲಿದ್ದಾರೆ ಎಂಬುದು ಗಮನಾರ್ಹವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply