KARNATAKA
ತಾಯಿಗೆ ಬೈದ ಪೊಲೀಸರ ಮೇಲಿನ ಕೋಪ, ವಿಧಾನಸೌಧ ಎದುರು ತನ್ನ ಸ್ಕೂಟರ್ಗೆ ಬೆಂಕಿ ಹಚ್ಚಿದ ಯುವಕ..!
ಬೆಂಗಳೂರು : ಚಿತ್ರದುರ್ಗದ ಯುವಕನೊಬ್ಬ ಪೊಲೀಸರು ತಾಯಿಗೆ ಬೈದ ಕೋಪಕ್ಕೆ ಬೆಂಗಳೂರಿನ ವಿಧಾನಸೌಧದ ಮುಂದೆಯೇ ತನ್ನ ಸ್ಕೂಟರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂಬ ಯುವಕ ವಿಧಾನಸೌಧದ ಮುಂಭಾಗದಲ್ಲಿ ಸ್ಕೂಟರ್ ನಿಲ್ಲಿಸಿ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆ ಸ್ಕೂಟರ್ ಸಂಪೂರ್ಣ ಹೊತ್ತಿ ಉರಿದಿದೆ. ಪೊಲೀಸರ ಪ್ರಕಾರ ಇತ್ತೀಚಿಗೆ ಪೃಥ್ವಿರಾಜ್ ಟ್ರಕ್ಕಿಂಗ್ ಹೋಗಿ ಮಿಸ್ಸಾಗಿದ್ದರು. ಈ ಹಿನ್ನಲೆಯಲ್ಲಿ ಗಾಬರಿಗೊಂಡ ಆತನ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಪೃಥ್ವಿ ತಾಯಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತನ್ನ ತಾಯಿಯನ್ನು ಬೈದಿದ್ದಕ್ಕೆ ಬೇಸರಗೊಂಡ ಪೃಥ್ವಿರಾಜ್, ವಿಧಾನಸೌಧದ ಮುಂದೆಯೇ ಸ್ಕೂಟರ್ಗೆ ಬೆಂಕಿ ಹಚ್ಚಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಸದ್ಯ ಯುವಕ ಪೃಥ್ವಿರಾಜನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.