DAKSHINA KANNADA
ಕಾಂಗ್ರೇಸ್ ಕಳೆದ 75 ವರ್ಷಗಳಿಂದ ಈ ಗೂಂಡಾ ಪ್ರವೃತ್ತಿಯನ್ನು ನಡೆಸಿಕೊಂಡು ಬಂದಿದೆ – ಸಚಿವ ಅಂಗಾರ

ಪುತ್ತೂರು ಜನವರಿ 04: ಕಳೆದ 75 ವರ್ಷಗಳಿಂದ ಕಾಂಗ್ರೇಸ್ ಗೂಂಡಾಗಿರಿಯನ್ನೇ ಮಾಡಿಕೊಂಡು ಬಂದಿದೆ ಎಂದು ಬಂದರು, ಮೀನುಗಾರಿಕಾ ಮತ್ತು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.
ರಾಮನಗರದಲ್ಲಿ ನಡೆದ ಘಟನೆಯ ಬಗ್ಗೆ ಪುತ್ತೂರಿನಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೇಸ್ ತಾನು ಏನೂ ಮಾಡಲ್ಲ, ಇತರರನ್ನೂ ಮಾಡಲು ಬಿಡಲ್ಲ ಎನ್ನುವ ಜಯಾಮಾನದವರು. ಕಾಂಗ್ರೆಸ್ ನ ಈ ಗೂಂಡಾಗಿರಿ ಪ್ರವೃತ್ತಿಯನ್ನು ಸ್ವತಹ ನಾನು ಕಳೆದ 56 ವರ್ಷಗಳಿಂದ ನೋಡಿಕೊಂಡು ಬಂದವ. ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಹತಾಶರಾಗಿರುವ ಕಾಂಗ್ರೇಸ್ ಈ ರೀತಿಯ ಗೂಂಡಾ ವರ್ತನೆಯನ್ನು ಮತ್ತೆ ಆರಂಭಿಸಿದೆ.

ರಾಮನಗರದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲೇ ಗಲಾಟೆ ಮಾಡುವ ಮೂಲಕ ತನ್ನ ಸಂಸ್ಕೃತಿಯನ್ನು ತೋರಿಸಿದೆ ಎಂದ ಅವರು ಯಾವುದೇ ಕಾರ್ಯಕ್ರಮಕ್ಕೂ ಸರಿಯಾದ ಸಮಯಕ್ಕೆ ಬಾರದ ಕಾಂಗ್ರೇಸಿಗರು ,ಬಳಿಕ ಅದೇ ವಿಚಾರದಲ್ಲಿ ಗಲಾಟೆಯನ್ನೂ ಮಾಡುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಇಂಥಹುದೇ ವರ್ತನೆಯಿದ್ದು, ಡಿ.ಕೆ.ಸುರೇಶ್ ಒರ್ವ ಜನಪ್ರತಿನಿಧಿಯಾಗಿದ್ದು, ಸಂಸದನಾಗಿ ಈ ರೀತಿಯ ವರ್ತನೆ ಖಂಡನೀಯ ಎಂದರು.