LATEST NEWS
ಮಾಸ್ಕೋ – ಪ್ರಯಾಣಿಕ ವಿಮಾನ ಪತನ – 43 ಮಂದಿ ಸಾವು

ಮಾಸ್ಕೋ ಜುಲೈ 24: ವಿಶ್ವದಲ್ಲಿ ವಿಮಾನಗಳ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಸುದ್ದಿಯಾಗುತ್ತಲೇ ಇದ್ದು, ಇದೀಗ ಪೂರ್ವ ರಷ್ಯಾದ ಅಮೂರ್ ಪ್ರದೇಶದಲ್ಲಿ ಪ್ರಯಾಣಿಕ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ 50 ಪ್ರಯಾಣಿಕರಲ್ಲಿ 43 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಅಂಗಾರಾ AN-24 ಎಂಬ ಸೈಬೀರಿಯಾ ಮೂಲದ ವಿಮಾನಯಾನ ಸಂಸ್ಥೆಗೆ ಸೇರಿದ ಈ ವಿಮಾನ, ಚೀನಾದ ಗಡಿಯಲ್ಲಿರುವ ಅಮೂರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ಅಪಘಾತಕ್ಕೀಡಾಗಿದೆ.
