Connect with us

    DAKSHINA KANNADA

    ಮಂಗಳೂರು : ತುಂಬೆಯಿಂದ ನಗರಕ್ಕೆ ನೀರು ಪೂರೈಕೆಯ ಕೊಳವೆಗೆ ಹಾನಿ, ನೀರಿನ ಸರಬರಾಜಿಗೆ ತೊಂದರೆ

    ಮಂಗಳೂರು : ಬಂಟ್ವಾಳದ ತುಂಬೆಯಿಂದ ಬೆಂದೂರ್‌ವೆಲ್‌ಗೆ ಬರುವ ಕುಡಿಯುವ ನೀರಿನ ಕೊಳವೆಯು ಹಾನಿ ಉಂಟಾಗಿದೆ. ಗೇಲ್ ಕಂಪೆನಿ ಕಾಮಗಾರಿಯಿಂದ  ನೀರು ಸರಬರಾಜಿನ ಮುಖ್ಯ ಕೊಳವೆಗೆ ಹಾನಿಯಾಗಿದೆ.

    ಇದರಿಂದಾಗಿ ಮಂಗಳಾದೇವಿ, ಪಾಂಡೇಶ್ವರ, ಕಣ್ಣೂರು, ಪಡೀಲ್, ಬಿಕರ್ನಕಟ್ಟೆ, ಕುಡುಪು, ವಾಮಂಜೂರು, ವೆಲೆನ್ಸಿಯ, ಕಂಕನಾಡಿ, ಹೊಯ್ಗೆ ಬಝಾರ್, ಬೋಳಾರ, ಜೆಪ್ಪಿನಮೋಗರು, ಜೆಪ್ಪು, ಅತ್ತಾವರ, ಸ್ಟೇಟ್ ಬ್ಯಾಂಕ್, ನಾಗುರಿ, ಚಿಲಿಂಬಿ, ಲೇಡಿ ಹಿಲ್, ಬಿಜೈ, ಬಜಾಲ್, ಶಕ್ತಿನಗರ – ಕುಂಜತ್ತಬೈಲ್ – ಬೊಂದೇಲ್ ಪ್ರದೇಶ ಹಾಗೂ ಉಳ್ಳಾಲದಲ್ಲೂ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.

    ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ ಹಾಗೂ ಕಾಂಗ್ರೆಸ್ ನಿಯೋಗ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗೇಲ್ ಕಂಪನಿಯ ಅವಂತಾರದಿಂದ ಕುಡಿಯುವ ನೀರಿನ ಕೊಳವೆ ಬಾವಿ ಹಾನಿಯಾಗಿದ್ದು, ಪಾಲಿಕೆ ವ್ಯಾಪ್ತಿಯ ೨೦ ವಾರ್ಡ್‌ಗಳಿಗೆ ನೀರಿಲ್ಲದೇ ಸಮಸ್ಯೆ ಎದುರಾಗಿದೆ.


    ವಾ.ಓ೦೧: ತುಂಬೆಯಿಂದ ಮಂಗಳೂರಿನ ಬೆಂದೂರ್‌ವೆಲ್‌ಗೆ ಬರುವ ಕುಡಿಯುವ ನೀರಿನ ಕೊಳವೆಯು ಹಾನಿ ಉಂಟಾಗಿದ್ದು, ಗೇಲ್ ಕಂಪನಿಯ ಕಾಮಗಾರಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಆಗ್ತಾ ಇದೆ, ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ ಹಾಗೂ ಕಾಂಗ್ರೆಸ್ ನಿಯೋಗ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ, ಕಳೆದ ರಾತ್ರಿ ಗೇಲ್ ಕಂಪನಿಯ ಅವಂತಾರದಿಂದಾಗಿ ಪೈ ಲೈನ್ ಹೊಡೆದು ಹೋಗಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡದೇ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ಮಂಗಳೂರು ನಗರಕ್ಕೆ ಮೂರು ದಿನ ಕುಡಿಯುವ ನೀರು ಇಲ್ಲದಂತಾಗಿದೆ ಎಂದು ಹೇಳಿದರು.
    ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ, ನೀರು ಸರಬರಾಜು ಹಾನಿಯಾಗಿದೆ. ಇದನ್ನು ಸರಿಪಡಿಸಲು ೩ರಿಂದ ೪ ದಿನಗಳ ಆಗುವ ಸಾಧ್ಯತೆ ಇದೆ. ಈ ಬಗೆ ಪಾಲಿಕೆ ಆಯುಕ್ತರ ಹತ್ತಿರ ಚರ್ಚೆ ಮಾಡಿದ್ದೇನೆ, ಹಾಗಾಗಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕೆಂದರು.
    ಪಾಲಿಕೆ ಸದಸ್ಯ ನವೀನ್ ಡಿಸೋಜಾ ಮಾತನಾಡಿ, ಗೇಲ್ ಗ್ಯಾಸ್ ಕಂಪನಿಯು ರಸ್ತೆಯನ್ನು ಅಗೆದು ಕುಡಿಯುವ ಪೈ ಲೈನ್ ಹೊಡೆದು ಹೋಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ೨೦ ವಾರ್ಡ್‌ಗಳಿಗೆ ನೀರು ಸರಬರಾಜು ಸ್ಥಗಿತವಾಗಿದೆ. ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ತ್ವರಿತ ರೀತಿಯಲ್ಲಿ ಕಾಮಗಾರಿ ಆಗ್ತಾ ಇದೆ. ಗೇಲ್ ಕಂಪನಿಯು ಮಂಗಳೂರು ಮಹಾನಗರ ಪಾಲಿಕೆಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಸೂಕ್ತ ಕ್ರಮತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು, ಈ ಸಂದರ್ಭ ಆಯುಕ್ತರಾದ ಕೆ.ಅನಂದ್, ಪಾಲಿಕೆ ಸದಸ್ಯ ಲಾನ್ಸಿಲೋಟ್ ಪಿಂಟೋ, .ಆಶ್ರಫ್ ಬಜಲ್, ಅಬ್ದುಲ್ ರವೂಫ್ ಮೊದಲಾದರು ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *