DAKSHINA KANNADA
ನಕ್ಸಲರಿಗಾಗಿ ಮುಂದುವರೆದ ಕೂಂಬಿಂಗ್ ಕಾರ್ಯಾಚರಣೆ
ಪುತ್ತೂರು ಮಾರ್ಚ್ 19: ದಕ್ಷಿಣಕನ್ನಡ ಹಾಗೂ ಕೊಡಗಿನ ಗಡಿಭಾಗ ಕಲ್ಮಕಾರಿನ ಗಡಿಯೊಂದರಲ್ಲಿ ದಿನಸಿ ಅಂಗಡಿಯಲ್ಲಿ ಸಾಮಾಗ್ರಿ ಖರೀಸಿಸಿದ್ದ ನಕ್ಸಲರ ತಂಡದ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಲಾಗಿದೆ.
ದಕ್ಷಿಣ ಕನ್ನಡ ಗಡಿ ಮತ್ತು ಮಡಿಕೇರಿ ತಾಲ್ಲೂಕಿನ ಕಡಮಕಲ್ಲು, ಕೂಜಿಮಲೆ ಅರಣ್ಯ ವ್ಯಾಪ್ತಿಯ ಕಲ್ಮಕಾಡು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಾಲ್ವರು ಬಂದೂಕುದಾರಿಗಳು ಆಗಮಿಸಿದ್ದರು. ಗ್ರಾಮದ ಅಂಗಡಿಯೊಂದಕ್ಕೆ ಆಗಮಿಸಿದ ಅವರು, 25 ಕೆಜಿ ಅಕ್ಕಿ ಸೇರಿ ಸುಮಾರು 3,500 ರೂಪಾಯಿಯ ದಿನಸಿ ಪದಾರ್ಥವನ್ನ ಖರೀದಿಸಿ ಅಲ್ಲಿಂದ ತೆರಳಿದ್ದಾರೆ. ತಂಡದಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದೀಗ ಪತ್ತೆಯಾದ ನಕ್ಸಲರ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ನಕ್ಸಲ್ ನಿಗ್ರಹ ದಳದ 3 ತುಕಡಿಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲದೆ ನಕ್ಸಲ್ ರ ಪತ್ತೆಗೆ ಡ್ರೋನ್ ಕ್ಯಾಮರಾ ನೆರವನ್ನು