Connect with us

LATEST NEWS

ಆಂಧ್ರಪ್ರದೇಶದ ಐಟಿ ಸಚಿವ ಮೇಕಪತಿ ಗೌತಮ್​ ರೆಡ್ಡಿ ಹೃದಯಾಘಾತದಿಂದ ನಿಧನ

ಹೈದರಾಬಾದ್ : ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ಸಚಿವ ಮೇಕಪತಿ ಗೌತಮ್​ ರೆಡ್ಡಿ(49) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇತ್ತೀಚೆಗೆ ಹೃದಯಾಘಾತ ಘಟನೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.


ಗೌತಮ್​ ರೆಡ್ಡಿ ಅವರಿಗೆ ಇಂದು ಬೆಳಗ್ಗೆ ಹಠಾತ್​ ಹೃದಯಾಘಾತ ಉಂಟಾಗಿದೆ. ಈ ವೇಳೆ ಜೂಬ್ಲಿ ಹಿಲ್ಸ್​ನ ಅಪೋಲೋ ಆಸ್ಪತ್ರೆಗೆ ರವಾನೆ ಮಾಡುತ್ತಿರುವಾಗಲೇ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಗೌತಮ್​ ರೆಡ್ಡಿ ಒಂದು ವಾರದ ಹಿಂದಷ್ಟೇ ದುಬೈ ಎಕ್ಸ್​ಪೋದಲ್ಲಿ ಪಾಲ್ಗೊಂಡು ವಿವಿಧ ಕಂಪನಿಗಳ ಜೊತೆ ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡುವ ಒಪ್ಪಂದ ಕುದುರಿಸಿದ್ದರು. ನಿನ್ನೆಯಷ್ಟೇ ದುಬೈಯಿಂದ ಹೈದರಾಬಾದ್​ಗೆ ಬಂದಿಳಿದಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *