LATEST NEWS
ಪತ್ನಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ರೇಟ್ ಫಿಕ್ಸ್ ಮಾಡಿದ ಪತಿರಾಯ!
ಹೈದರಾಬಾದ್, ಜನವರಿ 01: ಪ್ರಪಂಚದಲ್ಲಿ ಯಾವ ಯಾವ ರೀತಿ ಜನ ಇರ್ತಾರೆ ಅಂದ್ರೆ, ಹಣಕ್ಕಾಗಿ ಎನು ಬೇಕಾದರು ಮಾಡತ್ತಾರೆ ಅನ್ನೊದಕ್ಕೆ ಈ ಘಟನೆ ಸಾಕ್ಷಿ. ಆಂಧ್ರಪ್ರದೇಶದಲ್ಲಿ ವಿಕೃತ ಮನಸ್ಥಿತಿಯ ಗಂಡನೊಬ್ಬ ತನ್ನ ಪತ್ನಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಗಂಟೆಗೆ ಇಷ್ಟು ಅಂತಾ ರೇಟ್ ಫಿಕ್ಸ್ ಮಾಡಿದ್ದಾನೆ.
ಆಂಧ್ರಪ್ರದೇಶದ ತಿರುಪತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ರೇವಂತ್ ಎಸ್ ಜಿಎಸ್ ಕಾಲೇಜಿನಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಆಗಸ್ಟ್ ನಲ್ಲಿ ರೇವಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದನು. ಇನ್ನು ಮದುವೆಯಾದ ನಂತರ ಹೆಂಡತಿಗೆ, ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು.
ಇದರಿಂದ ಬೇಸತ್ತ ಮಹಿಳೆ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಳು. ಇದರಿಂದ ಆಕ್ರೋಶಿತನಾದ ರೇವಂತ್ ಪತ್ನಿಯ ಫೋಟೋವನ್ನು ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. ಕಾಲ್ ಗರ್ಲ್ ಅಂತ ಬಿಂಬಿಸಿ ಗಂಟೆಗೆ 3 ಸಾವಿರ ರೂಪಾಯಿ ಫಿಕ್ಸ್ ಮಾಡಿದ್ದಾನೆ.
ಇದನ್ನು ಗಮನಿಸಿದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗಂಡನ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಸಂಬಂಧಿತ ಆರೋಪದಡಿ ದೂರು ದಾಖಲಿಸಿದ್ದಾರೆ.