FILM
ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ – ಟೆಕ್ಕಿ ಜೊತೆ ಹಸೆಮಣೆ ಏರಲಿದ್ದಾರೆ ಅನುಶ್ರೀ

ಬೆಂಗಳೂರು ಜುಲೈ 17: ಕನ್ನಡದ ಖ್ಯಾತ ನಿರೂಪಕಿ ಮಂಗಳೂರಿನ ಹುಡುಗಿ ಅನುಶ್ರೀ ಮದುವೆ ವದಂತಿಗೆ ಪುಲ್ ಸ್ಟಾಪ್ ಬಿದ್ದಿದೆ. ಅಗಸ್ಟ್ 28 ರಂದು ಅನುಶ್ರೀ ಮದುವೆ ಎಂಬ ಮಾಹಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಂಗಳೂರಿನ ಹುಡುಗಿ ಅನುಶ್ರೀ ನಿರೂಪಕಿಯಾಗಿ ಖ್ಯಾತಿ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಅನುಶ್ರೀ ಮದುವೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಈ ಚರ್ಚೆಗೆ ಕೊನೆಗೂ ಪುಲ್ ಸ್ಟಾಪ್ ಬಿದ್ದಿದೆ.

ಕುಟುಂಬಸ್ಥರು ನೋಡಿದ ಹುಡುಗನ ಜೊತೆಯೇ ಅನುಶ್ರೀ ಮದುವೆಯಾಗುತ್ತಿದ್ದು ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀ ಕಲ್ಯಾಣ ಎನ್ನಲಾಗುತ್ತಿದೆ. ಮದುವೆ ನಿಶ್ಚಯವಾಗಿರುವ ಹುಡುಗ ಹಾಗೂ ಇನ್ನಿತರ ಮಾಹಿತಿಯನ್ನು ಅನುಶ್ರೀ ಗೌಪ್ಯವಾಗಿರಿಸಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿರುವ ಸುದ್ದಿ ಬಂದಿದೆ. ಸರಳ ಶಾಸ್ತ್ರೋಕ್ತವಾಗಿ ಮದುವೆಯಾಗಿ ಬಳಿಕ ಆಗಸ್ಟ್ 28ಕ್ಕೆ ಸಿನಿಮಾ ಇಂಡಿಸ್ಟ್ರಿಯವರನ್ನ ಆಮಂತ್ರಿಸಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಳ್ಳವ ಸಾಧ್ಯತೆ ಇದೆ.
1 Comment