Connect with us

    FILM

    ಡ್ರಗ್ಸ್ ಪ್ರಕರಣ – ನಟಿ ಅನನ್ಯಾ ಪಾಂಡೆ ಮೊಬೈಲ್ ಲ್ಯಾಪ್ ಟಾಪ್ ವಶಕ್ಕೆ ಪಡೆದ ಎನ್ ಸಿಬಿ

    ಮುಂಬೈ: ಡ್ರಗ್ಸ್ ಪ್ರಕರಣ ಇದೀಗ ಬಾಲಿವುಡ್ ನಲ್ಲಿ ತಲ್ಲಣ ಸೃಷ್ಠಿಸಿದ್ದು, ಶಾರುಖ್ ಖಾನ್ ಮಗ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾದ ಬಳಿಕ ಇದೀಗ ಮತ್ತೆ ಇತರ ಸೆಲೆಬ್ರಿಟಿಗಳ ಬೆನ್ನ ಹಿಂದೆ ಈ ಡ್ರಗ್ಸ್ ಪ್ರಕರಣದ ತನಿಖೆ ಮುಂದುವರೆದಿದೆ. ಇದೀಗ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ ಎನ್‌ಸಿಬಿ ಗುರುವಾರ ದಾಳಿ ನಡೆಸಿದೆ.


    ಈ ಸಂದರ್ಭದಲ್ಲಿ ಅನನ್ಯಾ ಪಾಂಡೆಗೆ ಸೇರಿವೆ ಎನ್ನಲಾದ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿದೆ. ಇದೇ ವೇಳೆ ಮುಂಬೈನ ಎನ್‌ಸಿಬಿ ಕಚೇರಿಯಲ್ಲಿ ಅನನ್ಯಾ ಪಾಂಡೆ ಅವರ ವಿಚಾರಣೆ ನಡೆಸಲಾಗಿದೆ. ಅನನ್ಯಾ ಪಾಂಡೆ ಅವರು ತಮ್ಮ ತಂದೆ ಹಾಗೂ ನಟ ಚಂಕಿ ಪಾಂಡೆಯೊಂದಿಗೆ ಎನ್‌ಸಿಬಿ ಕಚೇರಿಗೆ ವಿಚಾರಣೆಗೆ ತೆರಳಿದರು.


    ಈ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರ್ಯನ್ ಖಾನ್ ಅವರಿಗೆ ಇನ್ನೂ ಜಾಮೀನು ಲಭಿಸಿಲ್ಲ. ಈವರೆಗೆ ಮೂರು ಬಾರಿ ವಿಶೇಷ ನ್ಯಾಯಾಲಯ ಜಾಮೀನು ಆರ್ಜಿ ವಜಾಗೊಳಿಸಿದೆ. ಆರ್ಯನ್‌ ವಿರುದ್ಧ ಬಲವಾದ ಪುರಾವೆಗಳಿವೆ. ಜಾಮೀನು ನೀಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ವಿಶೇಷ ಕೋರ್ಟ್‌ ಸ್ಪಷ್ಟಪಡಿಸಿದೆ. ಈಗ ಆರ್ಯನ್ ಖಾನ್ ಅವರು ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಅಕ್ಟೋಬರ್ 26ಕ್ಕೆ ಅರ್ಜಿಯ ವಿಚಾರಣೆ ನಡೆಯಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *