LATEST NEWS
ಹಳ್ಳಿ ಮನೆ ರೊಟ್ಟಿಸ್ ಗೆ ಆಗಮಿಸಲಿರುವ ಆನಂದ್ ಮಹಿಂದ್ರಾ

ಹಳ್ಳಿ ಮನೆ ರೊಟ್ಟಿಸ್ ಗೆ ಆಗಮಿಸಲಿರುವ ಆನಂದ್ ಮಹಿಂದ್ರಾ
ಮಂಗಳೂರು ಫೆಬ್ರವರಿ 25: ಮಹೀಂದ್ರಾ ಕಂಪೆನಿಯ ಸಿಇಒ ಆನಂದ್ ಮಹಿಂದ್ರಾ ಖುದ್ದಾಗಿ ತಾವು ಹಳ್ಳಿ ಮನೆ ರೊಟ್ಟಿಸ್ ಗೆ ಭೇಟಿ ನೀಡಿ ಅವರ ಮಾಡುವ ರುಚಿಕರವಾದ ಆಹಾರ ತಿನ್ನಲು ಕಾಯುತ್ತಿದೇನೆ ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಟ್ಟೀಟ್ ಮಾಡಿರುವ ಆನಂದ್ ಮಹಿಂದ್ರಾ ಅವರು ಶಿಲ್ಪಾ ಅವರು ತಾವು ನೀಡಿರುವ ಮಹಿಂದ್ರಾ ಪಿಕಪ್ ವಾಹನದಲ್ಲಿ ಹೊಸ ಆಹಾರ ಮಳಿಗೆಯನ್ನು ಪ್ರಾರಂಭಿಸಿದಾಗ, ತಾನು ಖುದ್ದಾಗಿ ಆಗಮಿಸಿ ಅವರು ಮಳಿಗೆಯಲ್ಲಿ ಆಹಾರ ವನ್ನು ಸವಿಯಲು ಬಯಸಿದ್ದಾಗಿ ಟ್ವೀಟ್ ಮಾಡಿದ್ದಾರೆ.

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ಕೊಡಮಾಡುವ ಮಹಿಳಾ ಸಾಧಕಿ ಪುರಸ್ಕಾರಕ್ಕೆ ಆಯ್ಕೆ
ಹಳ್ಳಿ ಮನೆ ರೊಟ್ಟಿಸ್ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಇತರರಿಗೂ ಮಾದರಿಯಾಗಿದ್ದ ಮಂಗಳೂರಿನ ಶಿಲ್ಪಾ ಅವರನ್ನು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ಕೊಡಮಾಡುವ ಮಹಿಳಾ ಸಾಧಕಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ .
ಈ ಬಗ್ಗೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪೆನಿಯಿಂದ ಶಿಲ್ಪಾ ಅವರಿಗೆ ಖುದ್ದು ಕರೆ ಬಂದಿದ್ದು , ಮಾರ್ಚ್ 7 ರಂದು ಹೊಸದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮಾಹಿತಿ ನೀಡಿದ್ದಾರೆ. ಅದರಂತೆ ಶಿಲ್ಪಾ ಅವರಿಗೆ ಪ್ರಯಾಣದ ವೆಚ್ಚದ ವಿಮಾನ ಟಿಕೆಟ್ ಅಂಚೆ ಮೂಲಕ ಮನೆ ವಿಳಾಸಕ್ಕೆ ಬಂದಿದೆ. ಅಲ್ಲದೆ ಹೊಸದಿಲ್ಲಿಯಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ,. ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 16 ಮಹಿಳೆಯರನ್ನು ಸಂಸ್ಥೆ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು, ಇವರಲ್ಲಿ ಹಳ್ಳಿ ಮನೆ ರೊಟ್ಟಿಸ್ ಶಿಲ್ಪಾ ಕೂಡ ಒಬ್ಬರು ಎನ್ನುವುದು ಹೆಗ್ಗಳಿಕೆ.
ಹಾಸನ ಮೂಲದ ಶಿಲ್ಪಾ ಮಂಗಳೂರಿಗೆ ಆಗಮಿಸಿ ಹಲವಾರು ಕಷ್ಟಗಳ ನಡುವೆ ಬೀದಿ ಬದಿ ರೋಟ್ಟಿ ವ್ಯಾಪಾರ ಆರಂಭಿಸಿದ್ದರು. ಶಿಲ್ಪಾ ಅವರ ಹಳ್ಳಿಮನೆ ರೊಟ್ಟಿಸ್ ಸಾಧನೆಯ ಬಗ್ಗೆ ಮಾಧ್ಯಮ ಗಳ ವರದಿ ಸ್ಪಂದಿಸಿದ ಮಹೀಂದ್ರ ಸಂಸ್ಥೆಯ ಸಿಇಒ ಆನಂದ್ ಮಹೀಂದ್ರಾ ಇತ್ತೀಚೆಗೆ ಶಿಲ್ಪಾ ಅವರಿಗೆ ಮಹೀಂದ್ರಾ ಪಿಕಪ್ ವಾಹನವೊಂದನ್ನು ಉಡುಗೊರೆಯಾಗಿ ನೀಡಿದ್ದರು.