Connect with us

    LATEST NEWS

    ಡೈವೋರ್ಸ್ ವದಂತಿಗಳ ನಡುವೆ ಮಗಳ ಬರ್ತ್ ಡೆ ಗೆ ಗೈರಾದ ಅಭಿಷೇಕ ಬಚ್ಚನ್

    ಮುಂಬೈ ನವೆಂಬರ್ 21: ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಟನ್ ನಡುವಿನ ಡೈವೋರ್ಸ್ ಸುದ್ದಿ ದಿನದಿಂದ ದಿನ ನಿಜವಾಗುತ್ತಾ ಹೋಗುತ್ತಿದೆ. ಬಚ್ಚನ್ ಪ್ಯಾಮಿಲಿ ಜೊತೆ ಐಶ್ವರ್ಯಾ ಅವರು ಬಹುತೇಕ ತನ್ನ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಐಶ್ವರ್ಯಾ ರೈ ಮಗಳು ಆರಾಧ್ಯಾ ಬರ್ತಡೇ ಅಭಿಷೇಕ ಬಚ್ಚನ್ ಗೈರಾಗಿದ್ದು ಸುದ್ದಿಯಾಗಿದೆ.


    ಬಾಲಿವುಡ್ ನಟಿ ಐಶ್ವರ್ಯಾ ರೈ ಪುತ್ರಿ ಆರಾಧ್ಯ 13 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗಳ ಬರ್ತ್‌ಡೇಯನ್ನು ವಿಶೇಷವಾಗಿ ನಟಿ ಆಚರಿಸಿದ್ದಾರೆ. ಮಗಳು ಆರಾಧ್ಯ ಬರ್ತ್‌ಡೇ ಸಂಭ್ರಮದಲ್ಲಿ ಅಭಿಷೇಕ್ ಭಾಗಿಯಾಗದೇ ಇರೋದು ಇದೀಗ ಚರ್ಚೆಗೆ ಗ್ರಾಸವಾಗಿದೆ.

     

    ನಟಿ ಐಶ್ವರ್ಯಾ ಹಂಚಿಕೊಂಡ ಪೋಸ್ಟ್‌ನಲ್ಲಿ, ಅಜ್ಜ ದಿವಂಗತ ಕೃಷ್ಣರಾಜ್ ರೈ ಫೋಟೋಗೆ ಮುಂದೆ ಗೌರವದಿಂದ ಆರಾಧ್ಯ ನಮಸ್ಕರಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಬೃಂದ್ಯಾ ರೈ ಜೊತೆ ನಟಿ, ಆರಾಧ್ಯ ಪೋಸ್ ಕೊಟ್ಟಿದ್ದಾರೆ. ಆರಾಧ್ಯರ ಬಾಲ್ಯದ ಫೋಟೋ, ಬರ್ತ್‌ಡೇ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ನನ್ನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಬ್ಬರೂ ನನ್ನ ಜೀವನದ ಶಾಶ್ವತ ಪ್ರೀತಿ, ಅಪ್ಪ- ಅಜ್ಜ ಮತ್ತು ನನ್ನ ಪ್ರೀತಿಯ ಆರಾಧ್ಯ. ನನ್ನ ಹೃದಯ ನೀನು ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಅಭಿಷೇಕ್ ಮತ್ತು ಬಚ್ಚನ್ ಪರಿವಾರದವರು ಇಲ್ಲದೇ ಇರೋದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *