Connect with us

    MANGALORE

    ಆಳ್ವಾಸ್‌ ವಿರಾಸತ್‌-2018 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಇಂದು ಚಾಲನೆ

    ಆಳ್ವಾಸ್‌ ವಿರಾಸತ್‌ – 2018 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಇಂದು ಚಾಲನೆ

    ಮಂಗಳೂರು, ಜನವರಿ 12 : ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾ ಗಿರಿಯ ಪುತ್ತಿಗೆ ವಿವೇಕಾನಂದ ನಗರ ದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಇಂದಿನಿಂದ ಜನವರಿ 14ರ ವರೆಗೆ ನಡೆಯುವ ಆಳ್ವಾಸ್‌ ವಿರಾಸತ್‌-2018 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

    ಇಂದು ಸಂಜೆ 5.15 ರಿಂದ ಮೆರ ವಣಿಗೆ, 5.30ರಿಂದ 6.45ರ ವರೆಗೆ ಸಭೆ ನಡೆಯಲಿದೆ.

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ಯಲ್ಲಿ ನಾಗಾಲ್ಯಾಂಡ್‌ ರಾಜ್ಯ ಪಾಲ ಪಿ.ಬಿ. ಆಚಾರ್ಯ ವಿರಾಸತ್ 2018 ನ್ನು ಉದ್ಘಾಟಿಸಲಿದ್ದಾರೆ.

    ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರಾದ ಪದ್ಮಭೂಷಣ ರಾಜನ್‌ -ಸಾಜನ್‌ ಮಿಶ್ರಾ ಸಹೋದರರಿಗೆ ಆಳ್ವಾಸ್‌ ವಿರಾಸತ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    160 ಅಡಿ ಉದ್ದ, 60 ಅಡಿ ಅಗಲದ ವಿಶಾಲ ವೇದಿಕೆ, 50,000 ಮಂದಿ ಕುಳಿತು ಕಾರ್ಯಕ್ರಮ ಆಸ್ವಾದಿಸ ಬಹು ದಾದ ಗ್ಯಾಲರಿ, ಮೋಹಕ ವಿದ್ಯು ದ್ದೀಪಾಲಂಕಾರ, ಅತ್ಯುತ್ತಮ ಬೆಳಕು- ಧ್ವನಿ ವ್ಯವಸ್ಥೆ ವಿರಾಸತ್‌ ಸಂಭ್ರಮಕ್ಕೆ ಪೂರಕವಾಗಿದೆ.

    ವ್ಯವಸ್ಥಿತ ಪಾರ್ಕಿಂಗ್‌, ಖಾದ್ಯಗಳ ಮಳಿಗೆ ಗಳಿವೆ. ವಿದ್ಯಾರ್ಥಿ ಸ್ವಯಂ ಸೇವಕರು, ಮಾರ್ಗದರ್ಶಿ ಶಿಕ್ಷಕರು, ವಿವಿಧ ವಿಭಾಗಗಳ ನಿರ್ವಹಣ ಸಿಬಂದಿ, ಆಡಳಿತ ಮಂಡಳಿಯವರು ವಿರಾಸತ್‌ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

    ಎಲ್ಲಕ್ಕೂ ಮಿಗಿಲಾಗಿ ಆಳ್ವಾಸ್‌ ವಿರಾಸತ್‌ ಸಮಯಪ್ರಜ್ಞೆ, ಶಿಸ್ತಿಗೆ ಹೆಸರಾಗಿದೆ.

    ಉಚಿತ ಸಾರಿಗೆ:

    ಸಂಜೆ 5 ರಿಂದ ಮೂಡಬಿದಿರೆ ನಿಶ್ಮಿತಾ ಟವರ್ ಬಳಿಯಿಂದ ಪುತ್ತಿಗೆಗೆ ಮತ್ತು ಕಾರ್ಯಕ್ರಮ ಮುಗಿದ ಬಳಿಕ ಮೂಡಬಿದಿರೆಗೆ ತೆರಳಲು ಉಚಿತ ಬಸ್‌ ಸೌಕರ್ಯ ಕಲ್ಪಿಸಲಾಗಿದೆ.

    ಜ. 9ರಿಂದ ನಡೆದ ರಾಷ್ಟ್ರೀಯ ಚಿತ್ರಕಲಾವಿದರ ಶಿಬಿರ ಆಳ್ವಾಸ್‌ ವರ್ಣ ವಿರಾಸತ್‌-2018ರಲ್ಲಿ ಎಕ್ರಿಲಿಕ್‌ ಮಾಧ್ಯಮದಲ್ಲಿ ಸಿದ್ಧವಾದ ಚಿತ್ರಗಳ ಸಹಿತ ಅಪರೂಪದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಆಸಕ್ತರು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ವೀಕ್ಷಿಸಬಹುದು.

    Share Information
    Advertisement
    Click to comment

    Leave a Reply

    Your email address will not be published. Required fields are marked *