Connect with us

LATEST NEWS

ಸ್ಕೌಟ್ಸ್‌–ಗೈಡ್ಸ್‌ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ–22ಗೆ ಅದ್ದೂರಿ ಚಾಲನೆ

ಮೂಡಬಿದಿರೆ ಡಿಸೆಂಬರ್ 22: ಮೂಡಬಿದಿರೆ ಆಳ್ವಾಸ್ ನಲ್ಲಿ ನಡೆಯುತ್ತಿರುವ ಸ್ಕೌಟ್ಸ್‌–ಗೈಡ್ಸ್‌ನ ‘ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ–22ಗೆ ಅದ್ದೂರಿ ಚಾಲನೆ ಸಿಕ್ಕಿದೆ.


ರಾಜ್ಯ ಮತ್ತು ದೇಶದ ಬೇರೆಬೇರೆ ಭಾಗಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಬಂದಿರುವ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ ಗೆ ಆಗಮಿಸಿದ್ದು, ಈ ವಿಧ್ಯಾರ್ಥಿಗಳ ಸಾಗರದಲ್ಲಿ ಇದೇ ಮೊದಲಬಾರಿಗೆ ನಡೆಯುತ್ತಿರುವ ಸ್ಕೌಟ್ಸ್‌–ಗೈಡ್ಸ್‌ನ ‘ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ–22’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ಡಿಸೆಂಬರ್ 27ರವರೆಗೆ ಜಾಂಬೂರಿ ನಡೆಯಲಿದೆ. 25 ಎಕರೆಗೂ ವಿಸ್ತಾರದ ಪ್ರದೇಶದಲ್ಲಿ ಆಯೋಜಿಸಿದ್ದ ವಿವಿಧ ಪ್ರದರ್ಶನಗಳು, ಐದು ವೇದಿಕೆಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಿನವಿಡೀ ನಡೆಯಲಿದೆ.


ಭವ್ಯ ವೇದಿಕೆಯ ಮೇಲೆ ಜಾಂಬೂರಿಗೆ ಚಾಲನೆ ನೀಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ‘ಭಾರತದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಯುವ ಜನರನ್ನು ಗುರಿಯಾಗಿಟ್ಟುಕೊಂಡು ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಮುಂದಿನ 25 ವರ್ಷಗಳ ಕಾಲ ನಾವು ಹೊಸ ಹಾದಿಯಲ್ಲಿ ನಡೆದು, ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಅಭಿವೃದ್ಧಿಹೊಂದಿದ ರಾಷ್ಟ್ರ ಎನಿಸಬೇಕು. ವಿಶ್ವಶಾಂತಿ, ವಿಶ್ವಕಲ್ಯಾಣದ ದಿಕ್ಕಿನಲ್ಲಿ ನಾವು ಕೆಲಸ ಮಾಡಬೇಕು’ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಸ್ವಾತಂತ್ರ್ಯಾ ನಂತರ, ಇತ್ತೀಚಿನವರೆಗೂ ನಾವು ಕೀಳರಿಮೆಯ ಭಾವನೆಯಲ್ಲೇ ಇದ್ದೆವು. ಈಗ ಅದರಿಂದ ಹೊರಬರುತ್ತಿದ್ದೇವೆ. ಯುವ ಸಮುದಾಯದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ನಾವು ಕೀಳರಿಮೆಯಿಂದ ಸಂಪೂರ್ಣವಾಗಿ ಹೊರಬರಲಿದ್ದೇವೆ ಎಂಬ ವಿಶ್ವಾಸವಿದೆ’ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *