DAKSHINA KANNADA
ಪಕ್ಷೇತರ ಅಭ್ಯರ್ಥಿಯಿಂದ ಬಿಜೆಪಿ ಪಕ್ಷದ ಹೆಸರು ಮತ್ತು ಚಿಹ್ನೆ ಬಳಸುತ್ತಿರುವ ಆರೋಪ!

ಪುತ್ತೂರು, ಎಪ್ರಿಲ್ 30: ಪುತ್ತೂರು ವಿಧಾನ ಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಿಂದ ಬಿಜೆಪಿ ಪಕ್ಷದ ಹೆಸರು ಮತ್ತು ಚಿಹ್ನೆ ಬಳಸುತ್ತಿರುವುದಾಗಿ ಆರೋಪಿಸಿ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ.
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ರ ಏಜೆಂಟ್ ರಾಜೇಶ್ ಬನ್ನೂರು ಎಂಬವರಿಂದ ಪಕ್ಷೇತರ ಅಭ್ಯರ್ಥಿ ಬಿಜೆಪಿ ಮುಖಂಡ, ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ, ಪತ್ರಿಕಾ ಪ್ರಕಟನೆಗಳಲ್ಲಿ ಬಳಸುತ್ತಿರುವ ಬಗ್ಗೆ ಆರೋಪಿಸಲಾಗಿದೆ.

ಪಕ್ಷೇತರ ಅಭ್ಯರ್ಥಿ ಚುನಾವಣಾ ಇಲಾಖೆ ನೀಡಿದ ಚಿಹ್ನೆ ಬಳಸುವ ಬದಲು ಬಿಜೆಪಿ ಚಿಹ್ನೆ ಬಳಸುತ್ತಿರುವುದು ಚುನಾವಾ ನೀತಿಸಂಹಿತೆ ವಿರುದ್ಧ ಎಂದ ಬಿಜೆಪಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿದ್ದಾರೆ.