Connect with us

LATEST NEWS

ಮುಸ್ಲಿಮರ ಮನೆಯಲ್ಲಿ ಕುಟುಂಬ ಸದಸ್ಯೆಯಂತಿದ್ದ ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಸರ್ವಧರ್ಮ ಸಮನ್ವಯತೆ

ಉಡುಪಿ ಜನವರಿ 23: 75 ವರ್ಷಗಳ ಕಾಲ ಮುಸ್ಲಿಮರ ಮನೆಯಲ್ಲಿ ಕುಟುಂಬದ ಸದಸ್ಯೆಯಂತೆ ವಾಸವಾಗಿದ್ದು ಮೃತಪಟ್ಟ ಹಿಂದೂ ಮಹಿಳೆಯ ಅಂತ್ಯಸಂಸ್ಕಾರವನ್ನು ಹಿಂದೂ ಸಾಂಪ್ರದಾಯದಂತೆ ಕಾಪು ಮಲ್ಲಾರು ಗ್ರಾಮದ ಸರ್ವಧರ್ಮದವರು ನೇರವೆರಿಸಿದರು.


ಕಳೆದ 75 ವರ್ಷಗಳಿಂದ ಉದ್ಯಾವರ ಮೂಲದ ಜಾನಕಿ ಪೂಜಾರಿ ಅವರು ರಫೀಕ್ ಮನೆಯಲ್ಲಿ ವಾಸವಾಗಿದ್ದರು. ಜಾನಕಿ ಅವರ ಪತಿ ಹಾಗೂ ಅವರನ್ನು ನೋಡಿಕೊಳ್ಳುತ್ತಿದ್ದ ರಫೀಕ್ ಅವರ ತಂದೆ ಗೆಳೆಯರಾಗಿದ್ದರು. ಮಗ ಇದ್ದರೂ ಪತಿಯ ಅಗಲಿಕೆಯ ನಂತರ ಜಾನಕಿ ಅವರು ರಫೀಕ್ ತಾಯಿ ಜೊತೆ ಮುಂಬೈನಲ್ಲಿ ಅಡುಗೆ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಬಳಿಕ ರಫಿಕ್ ಅವರ ಕುಟುಂಬ ಮುಂಬೈ ಬಿಟ್ಟು ಉಡುಪಿಗೆ ಆಗಮಿಸಿದರೂ ಕೂಡ ಜಾನಕಿ ಅವರೊಂದಿಗೆ ಇದ್ದರು. 10 ವರ್ಷಗಳ ಹಿಂದೆ ಮಲ್ಲಾರು ಗರಡಿ ವಾರ್ಡ್‌ನಲ್ಲಿ ಮನೆ ಖರೀದಿಸಿದ ಬಳಿಕವೂ ನಮ್ಮ ಮನೆಯಲ್ಲಿ ಇರಲು ನಿರ್ಧರಿಸಿದ್ದರು.

ಬಾಲ್ಯದಲ್ಲಿ ಮಗನಂತೆ ಸಲುಹಿದ ಜಾನಕಿ ಅವರನ್ನು ರಫೀಕ್ ಅವರ ಕುಟುಂಬ ಅವರ ಕೊನೆಯ ದಿನದಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು. ಜಾನಕಿ 90ನೇ ವಯಸ್ಸಿನಲ್ಲಿ ಮಂಗಳವಾರ ಮೃತಪಟ್ಟಿದ್ದು, ಅವರ ಅಂತಿಮ ದರ್ಶನಕ್ಕೆ ಪುತ್ರ ಮತ್ತು ಮೊಮ್ಮಗಳು ಬಂದಿದ್ದರು. ರಫೀಕ್ ಮತ್ತು ಸಹೋದರ ಅಬ್ದುಲ್ ಖಾದರ್ ಇಚ್ಛೆಯಂತೆ ಹಿಂದೂ ಸಂಪ್ರದಾಯದ ಪ್ರಕಾರ ಅಂತಿಮ ವಿಧಿಗಳನ್ನು ಪೂರೈಸಿ ಕಾಪು ರುದ್ರಭೂಮಿಯಲ್ಲಿ ಸೂರಿ ಶೆಟ್ಟಿ ನೇತೃತ್ವ ಮತ್ತು ರಮೇಶ್ ಪೂಜಾರಿ ಮಲ್ಲಾರು ಮುಂದಾಳತ್ವದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಪುತ್ರ ಶೇಖರ ವಿಠಲ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *