FILM
ಮದುವೆಯಾದ ಮೂರೆ ತಿಂಗಳಲ್ಲಿ ಗುಡ್ ನ್ಯೂಸ್ ಕೊಟ್ಟ ಬಾಲಿವುಡ್ ನಟಿ ಆಲಿಯಾಭಟ್

ಮುಂಬೈ ಜೂನ್ 27: ಇತ್ತಿಚೆಗಷ್ಟೇ ಹಸೆಮಣಿ ಏರಿದ್ದ ಬಾಲಿವುಡ್ ನ ಜನಪ್ರಿಯ ಜೋಡಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಅದು ಆಲಿಯಾ ಹಾಗೂ ರಣಬೀರ್ ಕಪೂರ್ ತಂದೆ ತಾಯಿ ಆಗುತ್ತಿದ್ದಾರೆ. ಆಲಿಯಾ ಗರ್ಭಿಣಿ ಎನ್ನುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ನಮ್ಮ ಮಗು ಸದ್ಯದಲ್ಲಿ ಬರಲಿದೆ ಎಂದು ಸ್ಕ್ಯಾನಿಂಗ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
Continue Reading