FILM
ನೀಲಿ ಕಂಗಳ ಚೆಲುವೆ ಆಲಿಯಾ ಭಟ್ ರಣಬೀರ್ ಕಪೂರ್ ಮಗಳು….!!

ಮುಂಬೈ ಡಿಸೆಂಬರ್ 25: ಅನಿಮಲ್ ಸಿನೆಮಾದ ಭರ್ಜರಿ ಸಕ್ಸಸ್ ಖುಷಿಯಲ್ಲಿರುವ ರಣಬೀರ್ ಕಪೂರ್ ಇದೇ ಮೊದಲ ಬಾರಿಗೆ ತಮ್ಮ ಮಗಳ ಮುಖವನ್ನು ಹೊರಜಗತ್ತಿಗೆ ತೋರಿಸಿದ್ದಾರೆ. ಕ್ರಿಸ್‌ಮಸ್ ದಿನವೇ ರಾಹಾ ಕಪೂರ್ ಮುಖ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
2022ರಲ್ಲಿ ಮದುವೆಯಾಗಿದ್ದ ಜೋಡಿಗೆ ಅದೇ ವರ್ಷ ನವೆಂಬರ್ ನಲ್ಲಿ ರಾಹಾ ಹುಟ್ಟಿದ್ದಳು. ನವೆಂಬರ್ 6 ರಂದು ಹುಟ್ಟಿದ ರಾಹಾಗೆ 1 ವರ್ಷ ತುಂಬಿದ್ದು, ಇಲ್ಲಿಯವರೆಗೆ ಎಲ್ಲೂ ಅವಳ ಮುಖವನ್ನು ಮಾಧ್ಯಮಗಳಿಗೆ ತೋರಿಸಿರಲಿಲ್ಲ. ಮಗು ಜನಿಸಿದಾಗಿನಿಂದ ಇಲ್ಲಿಯವರೆಗೂ ಮಗುವಿನ ಖಾಸಗಿ ಜೀವನವನ್ನು ಗೌರವಿಸುವಂತೆ ಮಾಧ್ಯಮಗಳಿಗೆ ರಣಬೀರ್–ಅಲಿಯಾ ಮನವಿ ಮಾಡಿದ್ದರು. ಇತ್ತೀಚೆಗೆ ರಾಹಾ ಹುಟ್ಟುಹಬ್ಬದ ಫೋಟೊಗಳನ್ನು ಹಂಚಿಕೊಂಡಿದ್ದ ಅಲಿಯಾ, ‘ನನ್ನ ಬದುಕು, ನನ್ನ ಬೆಳಕು’ ಎಂದು ಬರೆದುಕೊಂಡಿದ್ದರು.
ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ ರಾಹಾಳನ್ನು ನೆಟ್ಟಿಗರು ಮುತ್ತಜ್ಜ ರಾಜ್ ಕಪೂರ್‌ಗೆ ಹೋಲಿಕೆ ಮಾಡಿದ್ದಾರೆ. ಇನ್ನು ಕೆಲವರು ಅಜ್ಜ ರಣಧೀರ್ ಕಪೂರ್ ಹಾಗೆ ಕಾಣಿಸುತ್ತಾಳೆ ಎಂದಿದ್ದಾರೆ.
