Connect with us

    DAKSHINA KANNADA

    ಆಲಡ್ಕ ಸದಾಶಿವ ದೇವಸ್ಥಾನ ಹಿಂದಿನ ವ್ಯವಸ್ಥಾಪನಾ ಸಮಿತಿಯಿಂದ ಗೊಂದಲ – ಮಾಜಿ ಮುಕ್ತೇಸರ ಬೋಳೋಡಿ ಚಂದ್ರಹಾಸ ರೈ ಆರೋಪ

    ಪುತ್ತೂರು ಜುಲೈ 03:ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪುರಾತನ ಕ್ಷೇತ್ರವಾದ ಆಲಡ್ಕ ಸದಾಶಿವ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಇಲ್ಲದಿದ್ದರೂ, ನಿಕಟಪೂರ್ವ ಸಮಿತಿಯ ಸದಸ್ಯರು ಕಾನೂನು ಮೀರಿ ದೇವಸ್ಥಾನದ ಕಾರ್ಯ ಚಟುವಟಿಕೆಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ದೇವಸ್ಥಾನದ ಮಾಜಿ ಮುಕ್ತೇಸರ ಬೋಳೋಡಿ ಚಂದ್ರಹಾಸ ರೈ ಆರೋಪಿಸಿದ್ದಾರೆ.

    ಪುತ್ತೂರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ದೇವಸ್ಥಾನದ ಮುಕ್ತೇಸರ ಆಗಿದ್ದ‌ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕೆಲಸಗಳನ್ನು ಮಾಡಿದ್ದೇನೆ. 2020 ಕ್ಕೆ ಬ್ರಹ್ಮಕಲಶ ನಡೆಸಲು ದಿನ ನಿಗದಿ ಮಾಡಲಾಗಿದ್ದರೂ, ಕೊರೊನಾ ಕಾರಣದಿಂದ ಬ್ರಹ್ಮಕಲಶ ದಿನಾಂಕವನ್ನು ಮುಂದೂಡಲಾಗಿತ್ತು. ಬಳಿಕ 2022 ರಲ್ಲಿ ದೇವಸ್ಥಾನದ ಬ್ರಹ್ಮಕಲಶ ನಡೆಯುವ ಸಂದರ್ಭದಲ್ಲಿ ನನ್ನ ಅಧಿಕಾರಾವಧಿ ಮುಗಿದ ಕಾರಣ, ಬ್ರಹ್ಮಕಲಶದ ನೇತೃತ್ವ ವಹಿಸಿಕೊಳ್ಳಲು ನನಗೆ ಸಾಧ್ಯವಾಗಿರಲಿಲ್ಲ. ಆ ಬಳಿಕ ಇದೀಗ ದೇವಸ್ಥಾನದ ಅಧಿಕೃತ ವಾಟ್ಸ್ ಅಪ್ ಗ್ರೂಪ್ ನಲ್ಲಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಯಾರೋ ಕಿಡಿಗೇಡಿಗಳು ಅಡಚಣೆ ಉಂಟುಮಾಡುತ್ತಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ.

    ಈ ಪೋಸ್ಟ್ ನಲ್ಲಿರುವ ವಿಚಾರಗಳು ಸುಳ್ಳಾಗಿದ್ದು, ಯಾವುದೇ ಆಧಾರವಿಲ್ಲದ ಈ ಮಾಹಿತಿಯನ್ನು ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಗ್ರೂಪ್ ಗೆ ಕಳುಹಿಸುವ ಮೂಲಕ ಭಕ್ತರಲ್ಲಿ ಗೊಂದಲಕ್ಕೆ ಕಾರಣರಾಗಿದ್ದಾರೆ. ಸುಳ್ಳು ಮಾಹಿತಿಗಳನ್ನು ದೇವಸ್ಥಾನದ ಗ್ರೂಪ್ ನಲ್ಲಿ ಹರಡಿರುವುದಲ್ಲದೆ,ದೇವಸ್ಥಾನದ ಕಾರ್ಯ ಚಟುವಟಿಕೆಗಳಲ್ಲಿ ಮೂಗು ತೂರಿಸುವ ಮೂಲಕ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಗೊಂದಲಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.

    ಅಲ್ಲದೆ ಈ ಹಿಂದೆ ಬಿಜೆಪಿ ಶಾಸಕರಾಗಿದ್ದ ಸಂಜೀವ ಮಠಂದೂರು ಅವರಿಂದ ಉದ್ಘಾಟಿಸಲಾದ ರಂಗಮಂದಿರವನ್ನು ಇದೀಗ ಮತ್ತೆ ಈಗಿನ ಶಾಸಕ ಅಶೋಕ್ ರೈ ಕೋಡಿಂಬಾಡಿ ಕೈಯಲ್ಲಿ ಉದ್ಘಾಟಿಸುತ್ತಿದ್ದು, ಶಾಸಕರನ್ನೂ ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ ಅವರು ಮತ್ತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಣರಾಗಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ನಾಟಕಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply