BELTHANGADI
ಬೊಳಿಯಾರ್ ತಲುಪಿದ ಆಕಾಂಕ್ಷಾ ಮೃ*ತದೇಹ – ಮುಗಿಲು ಮುಟ್ಟಿದ ಆಕ್ರಂದನ

ಬೆಳ್ತಂಗಡಿ ಮೇ 21: ಪಂಜಾಬ್ ನಲ್ಲಿ ನಿಗೂಢ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದ ಧರ್ಮಸ್ಥಳ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿಯಾಗಿದ್ದ ಆಕಾಂಕ್ಷಾ ಎಸ್. ನಾಯರ್(22) ಅವರ ಮೃತದೇಹ ಬುಧವಾರ ಬೆಳಗ್ಗೆ ಮನೆಗೆ ತಲುಪಿದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹ ತರಲಾಯಿತು. ಭಾರೀ ಮಳೆಯ ಹಿನ್ನಲೆ ಮನೆಗೆ ಸಾಗುವ ದಾರಿಯಲ್ಲಿ ಆ್ಯಂಬುಲೆನ್ಸ್ ಮಣ್ಣಿನಲ್ಲಿ ಹೂತ ಘಟನೆಯೂ ನಡೆಯಿತು. ನಂತರ ಸ್ಥಳೀಯರು ಆ್ಯಂಬುಲೆನ್ಸ್ ಟೈರ್ ಅನ್ನು ಮಣ್ಣಿನಿಂದ ಹೊರತೆಗೆದರು. ಸದ್ಯ ಆಕಾಂಕ್ಷಾ ಮೃತದೇಹ ಬೋಳಿಯಾರ್ನಲ್ಲಿರುವ ಮನೆಗೆ ತಲುಪಿದೆ. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿದೆ.
ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
