FILM
ಅಪ್ಪ ಅಮ್ಮನ ಹಳೆಯ ಪೋಟೋ ಹಂಚಿಕೊಂಡ ಐಶ್ವರ್ಯಾ ರೈ

ಮುಂಬೈ ಡಿಸೆಂಬರ್ 23: ಐಶ್ವರ್ಯಾ ರೈ ಬಚ್ಚನ್ ತಮ್ಮ ಪೋಷಕರ ವಿವಾಹ ವಾರ್ಷಿಕೋತ್ಸವದಂದು ತನ್ನ ಅಪ್ಪ ಅಮ್ಮನ ಹಳೆಯ ಪೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಮದುವೆಯಾದ ಹೊಸತರಲ್ಲಿ ತೆಗೆದ ತಂದೆ–ತಾಯಿಯ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಐಶ್ವರ್ಯಾ, ‘ಪ್ರೀತಿಯ ಅಪ್ಪ–ಅಮ್ಮ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಮದುವೆಯ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ನಿಮಗೆ ಶುಭಾಶಯ ತಿಳಿಸುತ್ತೇನೆ. ನಿಮಗಾಗಿ ಸದಾ ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯಾ ಅವರ ತಂದೆ ಕೃಷ್ಣರಾಜ್ ರೈ ಅವರು 2017 ರಲ್ಲಿ ನಿಧನರಾದರು. ಕೆಲವು ವಾರಗಳ ಹಿಂದೆ, ಅವರು ತಮ್ಮ ತಂದೆಯ ಜನ್ಮ ವಾರ್ಷಿಕೋತ್ಸವದ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದರಲ್ಲಿ ಅವರ ತಂದೆ ಮೊಮ್ಮಗಳು ಆರಾಧ್ಯ ಅವರೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು.

ಫೋಟೊ ನೋಡಿದ ಐಶ್ವರ್ಯಾ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದು, ‘ನೀವು ನಿಮ್ಮ ತಾಯಿ ಹಾಗೆ ಕಾಣಿಸುತ್ತಿದ್ದೀರಿ’ ಎಂದು ಹೇಳಿದ್ದಾರೆ.