Connect with us

FILM

ಮುಂಬೈ: ಐಶ್ವರ್ಯಾ ರೈ @50, ಜಿಎಸ್‌ಬಿ ಸೇವಾ ಮಂಡಲದಲ್ಲಿ ಹುಟ್ಟುಹಬ್ಬ ಆಚರಿಸಿ ರೂ. 1 ಕೋಟಿ ದೇಣಿಗೆ..!

ಮುಂಬೈ : ಬಹುಭಾಷಾ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ( aishwarya rai) ಬಚ್ಚನ್ 50 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಸಂದರ್ಭ ತನ್ನ ಹುಟ್ಟು ಹಬ್ಬದ ವಿಶೇಷ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.


ತನ್ನ 50 ನೇ ಹುಟ್ಟುಹಬ್ಬದಂದು, ಐಶ್ವರ್ಯಾ ರೈ( aishwarya rai) ತನ್ನ ಮಗಳು ಆರಾಧ್ಯ ಅವರೊಂದಿಗೆ ತನ್ನ ಪ್ರೀತಿಯ ಮುಂಬೈನ ಜಿಎಸ್‌ಬಿ ಸೇವಾ ಮಂಡಲಕ್ಕೆ ಭೇಟಿ ನೀಡಿ ಮಗಳು ಮತ್ತು ಇತರ ಕುಟುಂಬದ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಇದರ ಜೊತೆಗೆ ತನ್ನ ತಂದೆಯ ಸವಿ ನೆನಪಿಗಾಗಿ ತನ್ನ ಫೌಂಡೇಶನ್ ಮೂಲಕ ಮುಂಬೈ ನಗರದಲ್ಲಿ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಸಹಾಯ ಮಾಡಲು 1 ಕೋಟಿ ರೂ.ಗಳನ್ನು ದೇಣಿಗೆ ನೀಡಿ ಮಾದರಿಯಾದ್ರು.

ಈ ಮೂಲಕ ತನ್ನಹುಟ್ಟು ಹಬ್ಬವನ್ನು ಗೌಜಿ ಗದ್ದಲಗಳಿಲ್ಲದೆ ವಿಶೇಷ ದಿನವನ್ನಾಗಿ ಅರ್ಥಪೂರ್ಣವಾಗಿ ಆಚರಿಸಿದರು. ತನ್ನ ತಂದೆಗೆ ಗೌರವ ಸಲ್ಲಿಸುವುದರಿಂದ ಹಿಡಿದು ದೊಡ್ಡ ದೇಣಿಗೆ ನೀಡುವವರೆಗೆ, ಕರಾವಳಿಯ ಈ ತುಳುವೆದಿಗೆ ಚಿನ್ನದ ಹೃದಯವಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದರು.

1973ರ ನವೆಂಬರ್ 1ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು. ಮುಂಬೈ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದಾಗಲೆ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ, 1994ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದರು.
ಐಶ್ವರ್ಯ ರೈ ಮೊದಲ ಬಾರಿಗೆ ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾ “ಇರುವರ್” ನಟಿಸಿದ್ದರು. ಆದರೆ, ಈ ಸಿನಿಮಾ ಯಶಸ್ವಿಯಾಗಲಿಲ್ಲ. 2000ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ “ಕಂಡುಕೊಂಡೇನ್ ಕಂಡುಕೊಂಡೇನ್” ಯಶಸ್ವಿಯಾಯಿತು. ಐಶ್ವರ್ಯಾ ಅವರು ನಟಿಸಿರುವ ಬಹುಪಾಲು ಚಿತ್ರಗಳು ಹಿಂದಿ ಭಾಷೆಯವು. ಕೆಲವು ತಮಿಳು ಮತ್ತು ಒಂದು ಬೆಂಗಾಲಿ ಚಿತ್ರದಲ್ಲಿಯೂ ನಟಿಸಿದ್ದಾರೆ.
“ದೇವದಾಸ್” ಮತ್ತು “ಹಮ್ ದಿಲ್ ದೇ ಚುಕೇ ಸನಮ್” ಅವರ ಯಶಸ್ವಿ ಸಿನಿಮಾಗಲ್ಲೊಂದು. ಐಶ್ವರ್ಯಾ ರೈ ಫ್ರಾನ್ಸ್ ದೇಶದ ಕ್ಯಾನ್ಸ್ ನಲ್ಲಿ ನಡೆಯುವ ವಾರ್ಷಿಕ ಚಲನಚಿತ್ರೋತ್ಸವದ ಸಮಿತಿಯಲ್ಲಿ ಕೆಲಸ ಮಾಡಿರುವ ಏಕೈಕ ಭಾರತೀಯರಾಗಿದ್ದಾರೆ.
https://youtu.be/VZytjFAbpwE
Share Information
Continue Reading
Advertisement
Click to comment

Leave a Reply

Your email address will not be published. Required fields are marked *