Connect with us

LATEST NEWS

ಏರ್ ಶೋ ನಲ್ಲಿ ಯುದ್ದ ವಿಮಾನಗಳ ಡಿಕ್ಕಿ – 6 ಮಂದಿ ಸಾವು….!!

ವಾಷಿಂಗ್ಟನ್: ಏರ್ ಸೋ ಸಂದರ್ಭ ಎರಡು ಯುದ್ದ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು 6 ಮಂದಿ ಸಾವನಪ್ಪಿರುವ ಘಟನೆ ಅಮೆರಿಕದ ಟೆಕ್ಸಾಸ್‍ನ ಡಲ್ಲಾಸ್‍ನಲ್ಲಿ ನಡೆದಿದೆ.


2 ವಿಮಾನಗಳಾದ ಬಿ -17 ಬೊಂಬರ್ ಹಾಗೂ ಬೆಲ್ ಪಿ-63 ಕಿಂಗ್ ಕೋಬ್ರಾ ವಿಮಾನಗಳು ಏರ್‌ ಶೋನಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಬಿ – 17 ಬೊಂಬರ್ ವಿಮಾನಕ್ಕೆ ಬೆಲ್ ಪಿ -63 ವಿಮಾನ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಈ ವೇಳೆ ವಿಮಾನವೆರಡಕ್ಕೂ ಬೆಂಕಿ ಹೊತ್ತಿಕೊಂಡು ಛಿದ್ರವಾಗಿದೆ. ಈ ವೇಳೆ ನಡೆದ ಘರ್ಷಣೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ.

ಏರ್ ಶೋ ಪ್ರದರ್ಶನದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ 2 ವಿಮಾನಗಳು ಸ್ಫೋಟಗೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏರ್ ಶೋದಲ್ಲಿ ಭಾಗವಹಿಸಿರುವ ಜನರು ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *