LATEST NEWS
ಜೀವ ಸಂಕುಲಕ್ಕೆ ಮಾರಕವಾರ ಮಾಲಿನ್ಯ : 12 ವರ್ಷ ಜೀವಿತಾವಧಿ ಕಳಕೊಂಡ ದಿಲ್ಲಿ ಜನ..!
ರಾಷ್ಟ್ರ ರಾಜಧಾನಿ ದಿಲ್ಲಿ ಜಗತ್ತಿನ ಅತ್ಯಂತ ಮಾಲಿನ್ಯ ನಗರವಾಗಿ ಹೊರಹೊಮ್ಮಿದ್ದು, ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ.
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ಜಗತ್ತಿನ ಅತ್ಯಂತ ಮಾಲಿನ್ಯ ನಗರವಾಗಿ ಹೊರಹೊಮ್ಮಿದ್ದು, ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ.
ಚಿಕಾಗೋ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿದೆ ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ (ಎಕ್ಯುಎಲ್ಐ) 1.3 ಶತಕೋಟಿ ಜನರು ವಾರ್ಷಿಕ ಸರಾಸರಿ ಕಣಗಳ ಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ (5g/ m3) ಮಿತಿಯನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಕೂಡ ಹೇಳಿದೆ.
ದೇಶದ ಜನಸಂಖ್ಯೆ (ಶೇ. 67.4) ಜನರು ದೇಶದ ಸ್ವಂತ ರಾಷ್ಟ್ರೀಯ ಗುಣಮಟ್ಟ (40g/ m3) ಯನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ (5g/ m3) ಮಾಲಿನ್ಯ ಮಿತಿಯನ್ನು ತಲುಪಿದರೆ ಏನಾಗಬಹುದು ಎಂಬುದಕ್ಕೆ ಹೋಲಿಸಿದರೆ, ಸೂಕ್ಷ್ಮವಾದ ಕಣಗಳ ಮಾಲಿನ್ಯವು ಜನರ ಸರಾಸರಿ ಜೀವಿತಾವಧಿಯನ್ನು (5.3) ವರ್ಷಗಳಷ್ಟು ಕಡಿಮೆ ಮಾಡಲಿದೆ ಎಂದು ಅಧ್ಯಯನ ತಿಳಿಸಿದೆ.