LATEST NEWS
ದೆಹಲಿಯಲ್ಲಿ ಕಂಡು ಕೇಳರಿಯದಷ್ಟು ಹೊಗೆ ಮಾಲಿನ್ಯ
ದೆಹಲಿ ನವೆಂಬರ್ 03: ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರಿದ್ದು, ಈ ಹಿ೦ದೆ೦ದೂ ಕಂಡು ಕೇಳರಿಯದಷ್ಟು “ಹೊಗೆಮಾಲಿನ್ಯ’ ಸೃಷ್ಟಿಯಾಗಿದೆ. ದಿಲ್ಲಿಯ ಆನಂದ ವಿಹಾರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ನಂಬಲಸಾಧ್ಯವಾದ 999 ಅಂಕಗಳಿಗೆ ಕುಸಿತವಾಗಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯೊಂದು ಹೇಳಿದೆ. ಅಲ್ಲದೆ, ಇಡೀ ನಗರದ ಸರಾಸರಿ ಸೂಚ್ಯಂಕವು ‘ಅತಿ ಮಟ್ಟಕ್ಕೆ ಕುಸಿದಿದ್ದು, ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ.
ಹವಾಮಾನ ವರದಿ ನೀಡುವ ಎಕ್ಯುಐಸಿಎನ್ ಸಂಸ್ಥೆ ವರದಿಯೊಂದನ್ನು ನೀಡಿದ್ದು, ಆನಂದ ವಿಹಾರ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ 999ಕ್ಕೆ ಕುಸಿದಿದೆ ಎಂದಿದೆ. ಪಕ್ಕದ ನೋಯ್ಡಾದಲ್ಲಿ 469 ದಾಖಲಾಗಿದೆ. ಇದೇ ವೇಳೆ ಸರ್ಕಾರದ ವಾಯುಗುಣಮಟ್ಟ ನಿರ್ವಹಣಾ ಆಯೋಗವು ಬಹುತೇಕ ದೆಹಲಿಯಲ್ಲಿ ಗಾಳಿಯ ಗುಣಮಟ್ಟ 300ರಿಂದ 400 ಅಂಕಗಳನ್ನು ದಾಟಿದೆ ಎಂದಿದೆ. ಈ ಕಾರಣ ದಿಲ್ಲಿಯಲ್ಲಿ ಇಡೀ ದಿನ ದಟ್ಟ ಧೂಳು ಹೊಗೆ ವಾತಾವರಣ ಇದ್ದು ಕೇವಲ 500 ಮೀ. ಗೆ ಗೋಚರತೆ ಕುಸಿದಿದೆ. ಈ ಹಿನ್ನೆಲೆಯಲ್ಲಿ, ‘ವಾಯುವಿನಲ್ಲಿ ಶ್ವಾಸಕೋಸಕ್ಕೆ ಹಾನಿಕರವಾದ ಸೂಕ್ಷ್ಮ ಕಣಗಳ ಪ್ರಮಾಣ ಅಧಿಕವಾಗಿದ್ದು, ಇದರಿಂದ ಉಸಿ ರಾಟದ ಸಮಸ್ಯೆ, ನೆಗಡಿ, ಕೆಮ್ಮು, ಶ್ವಾಸಕೋಶದ ಸೋಂಕು ಉಂಟಾಗಬಹುದು.