Connect with us

    LATEST NEWS

    ಬಾಯ್​ಫ್ರೆಂಡ್ ನಾನ್​ವೆಜ್ ತಿನ್ನಬೇಡ ಎಂದಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಏರ್ ಇಂಡಿಯಾದ ಮಹಿಳಾ ಪೈಲೆಟ್

    ಮುಂಬೈ ನವೆಂಬರ 27: ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಯುವ ಮಹಿಳಾ ಪೈಲಟ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನಲ್ಲಿ ನಡೆದಿದೆ. ಮೃತ ಪೈಲೆಟ್ ನನ್ನು ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಸೃಷ್ಟಿ ತುಲಿ (25) ಎಂದು ಗುರುತಿಸಲಾಗಿದೆ. ಈಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರದಿಂದ ಬಂದ ಮೊದಲ ಮಹಿಳಾ ಪೆಲೆಟ್ ಆಗಿದ್ದಾಳೆ.


    ಸೃಷ್ಠಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸ್ ಮಾಹಿತಿಗಳ ಪ್ರಕಾರ ಸೃಷ್ಠಿ ತುಲಿ ಪ್ರಿಯಕರ ಆದಿತ್ಯ ಪಂಡಿತ್ ಎಂಬಾತ ಆಕೆಗೆ ಸಾರ್ವಜನಿಕವಾಗಿ ನಿಂದಿಸಿದ್ದಲ್ಲದೆ, ಆಹಾರಕ್ಕೆ ಸಂಬಂಧಿಸಿದಂತೆ ಆಕೆಯ ಮೇಲೆ ಕೂಗಾಡಿದ್ದಾನೆ ಎಂದು ಹೇಳಲಾಗಿದೆ. ಇದರಿಂದ ಮನನೊಂದು ಸೃಷ್ಠಿ ಸೋಮವಾರ ಬೆಳಗ್ಗೆ ಅಂಧೇರಿ(ಪೂರ್ವ)ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್‌ನ ಹಿಂಭಾಗದ ಬಾಡಿಗೆ ನಿವಾಸದಲ್ಲಿ  ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಬಾಯ್ ಫ್ರೆಂಡ್ ಜೊತೆಗಿನ ಜಗಳದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸೋಮವಾರ ಅಂಧೇರಿಯ ಮರೋಲ್‌ನಲ್ಲಿ ತನ್ನ ಗೆಳತಿ ಸೃಷ್ಟಿ ತುಲಿ ಆತ್ಮಹತ್ಯೆ ಮಾಡಿಕೊಂಡ ನಂತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೆಹಲಿಯ ಆದಿತ್ಯ ಪಂಡಿತ್ (27) ಎಂಬಾತನನ್ನು ಮುಂಬೈನ ಪೊವೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಆದಿತ್ಯ ಪಂಡಿತ್, ಮಾಂಸಾಹಾರಿ ಆಹಾರವನ್ನು ಸೇವಿಸದಂತೆ ಸೃಷ್ಟಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಕುಟುಂಬಸ್ಥರು ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕಮರ್ಷಿಯಲ್ ಪೈಲಟ್ ಲೈಸೆನ್ಸ್‌ಗಾಗಿ ತರಬೇತಿ ಪಡೆಯುತ್ತಿರುವಾಗ ಆದಿತ್ಯ ಮತ್ತು ಸೃಷ್ಟಿ ದೆಹಲಿಯಲ್ಲಿ ಭೇಟಿಯಾಗಿದ್ದರು. ತರಬೇತಿಯ ನಂತರ, ಸೃಷ್ಟಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು. ಆದರೆ ಆಗಿತ್ಯ ಪಂಡಿತ್ ಪೈಲಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *