FILM
ಉಡುಪಿ : ‘ಕಂಗುವಾ’ದಿಂದ ಕಂಗಾಲು,ಕೊಲ್ಲೂರು ತಾಯಿ ಮೂಕಾಂಬಿಕೆಯ ಮೊರೆ ಹೋದ ನಟ ಸೂರ್ಯ ದಂಪತಿ..!
ಭಾರಿ ನಿರೀಕ್ಷೆ ಇಟ್ಟುಕೊಂಡು ಕೋಟ್ಯಾಂತ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಕಂಗುವಾ ಸಿನಿಮಾ ಸಂಪೂರ್ಣ ನೆಲಕಚ್ಚಿದೆ. ಈ ಹಿನ್ನೆಲೆಯಲ್ಲಿ ಕಂಗಾಲಾದ ನಟ ಸೂರ್ಯ ಪತ್ನಿ ಜ್ಯೋತಿಕಾ ಸಮೇತರಾಗಿ ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ಧಾವಿಸಿ ಬಂದಿದ್ದಾರೆ.
ಉಡುಪಿ : ಭಾರಿ ನಿರೀಕ್ಷೆ ಇಟ್ಟುಕೊಂಡು ಕೋಟ್ಯಾಂತ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಕಂಗುವಾ ಸಿನಿಮಾ ಸಂಪೂರ್ಣ ನೆಲಕಚ್ಚಿದೆ. ಈ ಹಿನ್ನೆಲೆಯಲ್ಲಿ ಕಂಗಾಲಾದ ನಟ ಸೂರ್ಯ ಪತ್ನಿ ಜ್ಯೋತಿಕಾ ಸಮೇತರಾಗಿ ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ಧಾವಿಸಿ ಬಂದಿದ್ದಾರೆ.
ನಟ ಸೂರ್ಯ ಮತ್ತು ಅವರ ಪತ್ನಿ ತಾರೆ ಜ್ಯೋತಿಕಾ ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಭೇಟಿಯನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿದ್ದು ಯಾರಿಗೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ದೇವಳಕ್ಕೆ ಬರುವ ಬಗ್ಗೆ ಅಭಿಮಾನಿಗಳಿಗಾಗಲೀ ದೇವಸ್ಥಾನ ಆಡಳಿತ ಮಂಡಳಿಗಾಗಲೀ ಪೂರ್ವ ಮಾಹಿತಿ ನೀಡದೇ ಸಾಮಾನ್ಯ ಭಕ್ತರಂತೆ ಢಿಡೀರ್ ಭೇಟಿ ನೀಡಿದ್ದಾರೆ. ದೇವಳಕ್ಕೆ ಆಗಮಿಸಿದ್ದ ದಂಪತಿಯನ್ನು ಗಮನಿಸಿದ ಆಡಳಿತ ಮಂಡಳಿ ಸಿಬ್ಬಂದಿ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
ಸಿವ ನಿರ್ದೇಶಿಸಿ ಅಧಿ ನಾರಾಯಣ ಸಹ-ಲೇಖನ ಮಾಡಿರುವ ಸೂರ್ಯ ನಟನೆಯ ಭಾರಿ ನಿರೀಕ್ಷೆ ಇದ್ದ ಬಿಗ್ ಬಜೆಟ್ ಸಿನಿಮಾ ‘ಕಂಗುವಾ’ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಭವ್ಯ ಕಾಲ್ಪನಿಕ ಕ್ರಿಯಾ-ಸಾಹಸ ಚಿತ್ರವಾಗಿರುವ ಈ ಚಿತ್ರದಲ್ಲಿ ಸೂರ್ಯ, ಬಾಬಿ ದೇವೋಲ್, ದಿಶಾ ಪಟಾನಿ ಮತ್ತು ಯೋಗಿ ಬಾಬು ಸೇರಿದಂತೆ ಪ್ರತಿಭಾವಂತ ತಾರಾಗಣವಿದೆ. ಅದ್ಭುತ ಸಾಹಸಮಯ ದೃಶ್ಯಗಳನ್ನು ಹೊಂದಿದ್ದರೂ ಮತ್ತು ಸೂರ್ಯನ ಅತ್ಯುತ್ತಮ ಪ್ರದರ್ಶನವಿದ್ದರೂ, ಚಿತ್ರದ ಗತಿ ಮತ್ತು ಕಥಾ ಹಂದರದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದುವು. ಗಳಿಕೆಯಲ್ಲೂ ಚಿತ್ರ ಹಿಂದೆ ಬಿದ್ದಿದ್ದು ಕೇವಲ 67.96 ಕೋಟಿ ರೂಪಾಯಿ ಗಳಿಸಿತ್ತು. ಮಿಶ್ರ ವಿಮರ್ಶೆಗಳು ಮತ್ತು ಅಭಿಮಾನಿಗಳ ಒಂದು ವರ್ಗದಿಂದ ಗುರಿಯಾಗುವ ಪ್ರತಿಕ್ರಿಯೆಗಳು ಚಿತ್ರ ಸಂಪೂರ್ಣ ನೆಲಕಚ್ಚುವಂತೆ ಮಾಡಿತ್ತು. ಇದರಿಂದ ನಟ ಸೂರ್ಯ ತೀವ್ರ ನಿರಾಶೆಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಶ್ರಿ ದೇವಿಯ ದರ್ಶನ ಪಡೆಯಲು ಪತ್ನಿ ಜ್ಯೋತಿಕಾ ಸಮೇತರಾಗಿ ಕೊಲ್ಲೂರು ದೇವಳಕ್ಕೆ ಧಾವಿಸಿ ಬಂದಿದ್ದರು ಎನ್ನಲಾಗಿದೆ.