LATEST NEWS
ಅಡ್ಯಾರ್ ನಲ್ಲಿ ವಕ್ಟ್ ಮಸೂದೆ ವಿರೋಧಿಸಿ ಬೃಹತ್ ಸಮಾವೇಶ – ಎಪ್ರಿಲ್ 18 ರಂದು ವಾಹನ ಸಂಚಾರದಲ್ಲಿ ಬದಲಾವಣೆ

ಮಂಗಳೂರು ಎಪ್ರಿಲ್ 16: ಅಡ್ಯಾರ್ ನ ಕಣ್ಣೂರು ಬಳಿ ಇರುವ ಷಾ ಗಾರ್ಡನ್ ಮೈದಾನದಲ್ಲಿ ಎಪ್ರಿಲ್ 18 ರಂದು ವಕ್ಪ್ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನಾ ಸಮಾವೇಶವು ನಡೆಯಲಿದ್ದು, ಅಡ್ಯಾರು ಕಣ್ಣೂರು ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿದ್ದು, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಧ್ಯಾಹ್ನ 12-00 ಗಂಟೆಯಿಂದ ರಾತ್ರಿ 9-00 ಗಂಟೆಯ ವರೆಗೆ ಸಂಚಾರ ದಟ್ಟಣೆ ಆಗಬಹುದಾದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ – ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ಅರ್ಕುಳ (ಎರಡು ಕಡೆಯಿಂದ) ಮಾರ್ಗಗಳ ಬದಲಾಗಿ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಲು ಕೋರಿದೆ.
ವಾಹನ ಸಂಚಾರ ದಟ್ಟಣೆಯಾಗುವ ಮಾರ್ಗಗಳು
• ಪಂಪುವೆಲ್ / ನಂತೂರು – ಪಡೀಲ್ – ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ಅರ್ಕುಳ – ಪರಂಗಿಪೇಟೆ – ತುಂಬೆ – ಬಿ.ಸಿ.ರೋಡ್ (ರಾಷ್ಟ್ರೀಯ ಹೆದ್ದಾರಿ – 73) ರಸ್ತೆಯಲ್ಲಿ ಮಂಗಳೂರು ನಗರಕ್ಕೆ ಬರುವ ಹಾಗೂ ಹೋಗುವ ಘನ ವಾಹನಗಳು, ಎಲ್ಲಾ ತರಹದ ಸರಕು ವಾಹನಗಳು ಹಾಗೂ ಬಸ್ಸುಗಳ ಸಂಚಾರಕ್ಕಾಗಿ ಬದಲಿ ಮಾರ್ಗ ಉಪಯೋಗಿಸುವುದು.
• ಪಡೀಲ್ – ಕಣ್ಣೂರು – ಅಡ್ಯಾರ್ ಕಟ್ಟೆ ರಸ್ತೆಯಲ್ಲಿ ಮಂಗಳೂರು ನಗರಕ್ಕೆ ಬರುವ ಹಾಗೂ ಹೊರಡುವ ಎಲ್ಲಾ ತರಹದ ಲಘ ವಾಹನಗಳು ಮತ್ತು ದ್ವಿ-ಚಕ್ರ ವಾಹನಗಳ ಚಾಲಕರು / ಸವಾರರು ಬದಲಿ ಮಾರ್ಗ ಉಪಯೋಗಿಸುವುದು.
• ಪಂಪುವೆಲ್ / ನಂತೂರು – ಪಡೀಲ್ – ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ಅರ್ಕುಳ – ಪರಂಗಿಪೇಟೆ – ತುಂಬೆ – ಬಿ.ಸಿ.ರೋಡ್ (ರಾಷ್ಟ್ರೀಯ ಹೆದ್ದಾರಿ – 73) ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡತಕ್ಕದಲ್ಲ.

ಸಾರ್ವಜನಿಕರು ಈ ಕೆಳಗಿನಂತೆ ಪರ್ಯಾಯ ರಸ್ತೆಗಳನ್ನು ಬಳಸಲು ಕೋರಲಾಗಿದೆ.
ಮೆಲ್ಕಾರು ಜಂಕ್ಷನ್- ಪುತ್ತೂರು/ಬಂಟ್ವಾಳ/ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ/ ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್ – ಬೊಳಿಯಾರ್ – ಮುಡಿಪು – ದೇರಳಕಟ್ಟೆ – ತೊಕ್ಕೊಟ್ಟು ಮೂಲಕ ಸಂಚರಿಸುವುದು.
ಬಿ.ಸಿ. ರೋಡ್ ಪೊಳಲಿ ದ್ವಾರ-ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಪೊಳಲಿ ದ್ವಾರದ ಮೂಲಕ ಕಲ್ಪನೆ ಜಂಕ್ಷನ್ – ನೀರುಮಾರ್ಗ – ಬೈತುರ್ಲಿ – – ಕುಲಶೇಖರ – ನಂತೂರು ಮೂಲಕ ಸಂಚರಿಸುವುದು.
ವಳಚ್ಚಿಲ್ ಜಂಕ್ಷನ್-ಬಿ.ಸಿ.ರೋಡ್ / ತುಂಬೆ / ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು (ಕಾರು/ರಿಕ್ಷಾ/ಬೈಕ್) ವಳಚ್ಚಿಲ್‌ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು – ನೀರುಮಾರ್ಗ – ಬೈತುರ್ಲಿ – ನಂತೂರು ಮೂಲಕ ಸಂಚರಿಸುವುದು.
ಅಡ್ಯಾರ್ ಕಟ್ಟೆ-ಬಿ.ಸಿ.ರೋಡ್ / ತುಂಬೆ / ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು (ಕಾರು/ರಿಕ್ಷಾ/ಬೈಕ್) ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್ – ಕೊಣಾಜೆ – ದೇರಳಕಟ್ಟೆ – ತೊಕ್ಕೊಟ್ಟು ಮೂಲಕ ಸಂಚರಿಸುವುದು.
ಪಂಪ್‌ವೆಲ್ ಜಂಕ್ಷನ್- ಮಂಗಳೂರು ನಗರದ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳಿಯಾರ್ – ಮೆಲ್ಕಾರ್ ಮೂಲಕ ಸಂಚರಿಸುವುದು.
ನಂತೂರು ವೃತ್ತ- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ – ಕುಲಶೇಖರ – ಬೈತುರ್ಲಿ ಜಂಕ್ಷನ್ – ನೀರುಮಾರ್ಗ – ಕಲ್ಪನೆ ಜಂಕ್ಷನ್- ಬಿ.ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಸಂಚರಿಸುವುದು.
ಕೆ.ಪಿ.ಟಿ. ವೃತ್ತ- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ – ಪಚ್ಚನಾಡಿ – ವಾಮಂಜೂರು – ಬೈತುರ್ಲಿ ಜಂಕ್ಷನ್ – ನೀರುಮಾರ್ಗ – ಕಲ್ಪನೆ ಮೂಲಕ ಅಥವಾ ಬೋಂದೆಲ್ – ಕಾವೂರು – ಬಜಪೆ – ಕೈಕಂಬ – ಮೂಡಬಿದ್ರೆ ಮೂಲಕ ಸಂಚರಿಸುವುದು.
ಮುಲ್ಕಿ ವಿಜಯಸನ್ನಿಧಿ- ಉಡುಪಿ / ಮುಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ – ಮೂಡಬಿದ್ರೆ – ಸಿದ್ದಕಟ್ಟೆ – ಬಂಟ್ವಾಳ ಮೂಲಕ ಸಂಚರಿಸುವುದು.
ಪಡುಬಿದ್ರೆ -ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ – ಮೂಡಬಿದ್ರೆ – ಸಿದ್ದಕಟ್ಟೆ – ಬಂಟ್ವಾಳ ಮೂಲಕ ಸಂಚರಿಸುವುದು.
ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿ.