Connect with us

    LATEST NEWS

    ಬುದ್ದಿ ಮಾತು ಹೇಳಿದ ತಾಯಿ: ಚಲಿಸುವ ರೈಲಿನ ಮುಂದೆ ಹಾರಿದ ಬಾಲಕಿ!

    ಉತ್ತರಪ್ರದೇಶ, ಡಿಸೆಂಬರ್ 08: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಾಯಿ ತನ್ನನ್ನು ನಿಂದಿಸಿದಳು ಎಂದು ಮನನೊಂದು ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ವರದಿಯಾಗಿದೆ.

    ಪೊಲೀಸ್ ಮೂಲಗಳ ಪ್ರಕಾರ, ಆತ್ಯಹತ್ಯೆಗೆ ಶರಣಾದ 13 ವರ್ಷ ವಯಸ್ಸಿನ ಬಾಲಕಿಯನ್ನು ಖುಷಿ ಶರ್ಮಾ ಎಂದು ಗುರುತಿಸಲಾಗಿದ್ದು, ಆಕೆಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಇದರಿಂದ ಕುಪಿತಗೊಂಡ ಆಕೆಯ ತಾಯಿ ಮಗಳು ಶಾಲೆಗೆ ಹೋಗುವಂತೆ ಒತ್ತಾಯಿಸಿ, ಗದರಿಸಿದ್ದಾರೆ. ತದನಂತರ ಕಪಾಳಮೋಕ್ಷ ಕೂಡ ಮಾಡಿದ್ದಾರೆ. ಇದರಿಂದ ತೀವ್ರ ಮನನೊಂದ ಶರ್ಮಾ ಅವರ ಪುತ್ರಿ ಖುಷಿ, ಶಾಲೆಗೆ ಹೋಗುವ ಬದಲು ಅಲ್ವಾರ್-ಮಥುರಾ ರೈಲ್ವೇ ಟ್ರ್ಯಾಕ್ ಬಳಿ ಹೋಗಿ ರೈಲಿನ ಮುಂದೆ ಜಿಗಿದಿದ್ದಾಳೆ.

    ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಖುಷಿ ತನ್ನ ತಾಯಿ ಬೈದು, ಗದರಿದ್ದಕ್ಕೆ ಮನನೊಂದು ಆತ್ಯಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply