Connect with us

FILM

2024 ಕ್ಕೆ ನಾನು ” ಅಮ್ಮ” – ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ

ಬೆಂಗಳೂರು ಜನವರಿ 01: ಕನ್ನಡದ ಖ್ಯಾಕ ನಟಿ ಅದಿತಿ ಪ್ರಭುದೇವ ಅವರು ತಾವು ಗರ್ಭಿಣಿಯಾಗಿರುವ ವಿಚಾರವನ್ನು ಹೊಸವರ್ಷದ ದಿನ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಾವು ಗರ್ಭಿಣಿಯಾಗಿರುವ ವಿಷಯವನ್ನು ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಒಂದರ ಮೂಲಕ ತಿಳಿಸಿರುವ ಅದಿತಿ, ‘2024ಕ್ಕೆ ನಾನು ಅಮ್ಮ’ ಎಂದಿದ್ದಾರೆ.


ಉದ್ಯಮಿ ಯಶಸ್‌ ಜೊತೆಗೆ ಅದಿತಿ ಅವರ ಮದುವೆ 2022ರ ನವೆಂಬರ್‌ನಲ್ಲಿ ನಡೆದಿತ್ತು. ದಾವಣಗೆರೆಯ ಅದಿತಿ ಕಿರುತೆರೆಯಿಂದ ‘ಧೈರ್ಯಂ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟವರು. ‘ಸಂಬಂಧಗಳಲ್ಲಿ ಶ್ರೇಷ್ಠವಾದದ್ದು, ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ ‘ಅಮ್ಮ’. ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ‘ಅಮ್ಮ’. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ‘ಅಮ್ಮ’. 2024ಕ್ಕೆ ನಾನು ಅಮ್ಮ’ ಎಂದು ಅದಿತಿ ಉಲ್ಲೇಖಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *