FILM
4 ಕೋಟಿಯ ಲ್ಯಾಂಬೊರ್ಗೀನಿ ಕಾರು ಖರೀದಿಸಿದ ಶ್ರದ್ಧಾ ಕಪೂರ್..!

ಮಂಬೈ : ದಸರಾ ಹಬ್ಬದ (Dasara) ಶುಭ ಸಂದರ್ಭದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shradha Kapoor) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.
ನಟಿ ಶ್ರದ್ದಾ ಹೊಚ್ಚ ಹೊಸ ಲ್ಯಾಂಬೊರ್ಗೀನಿ (Lamborghini Huracan Tecnica) ಕಾರು ಖರೀದಿಸಿದ್ದಾರೆ. ಹೊಸ ಕಾರಿನ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ದಸರಾ ಹಬ್ಬದ ಹಿನ್ನೆಲೆ ದುಬಾರಿ ಕಾರು ಖರೀದಿಸಿದ್ದಾರೆ. 4 ಕೋಟಿ ರೂ. ಬೆಲೆ ಬಾಳುವ ಕೆಂಪು ಬಣ್ಣದ ಲ್ಯಾಂಬೊರ್ಗೀನಿ ಕಾರು ಕೊಂಡಿದ್ದಾರೆ.
ನಟಿ ಕಾರ್ ಡ್ರೈವ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹೊಸ ಕಾರು ಖರೀದಿಸಿದ ಬಳಿಕ ಶ್ರದ್ದಾ ಕಪೂರು ಸ್ವತಃ ಕಾರು ಡ್ರೈವ್ ಮಾಡಿ ಇಸ್ಕಾನ್ ದೇವಳಕ್ಕೆ ತೆರಳಿ ಪೂಜೆ ಕೂಡ ಮಾಡಿಸಿದ್ದಾಳೆ.
90 ರ ದಶಕದಲ್ಲಿ ಖಳನಟನಾಗಿ ಗಮನ ಸೆಳೆದಿರುವ ಶಕ್ತಿ ಕಪೂರ್ ಅವರ ಮಗಳು ಶ್ರದ್ಧಾ ಕಪೂರ್ ಕೂಡ ಬಾಲಿವುಡ್‌ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ದುಬಾರಿ ಕಾರಿನ ಸುದ್ದಿಯಲ್ಲಿರುವ ಶ್ರದ್ಧಾ ಕಪೂರ್‌ಗೆ ಮದುವೆ ಯಾವಾಗ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.ರಣ್‌ಬೀರ್-ಶ್ರದ್ಧಾ ನಟನೆಯ ‘ತೂ ಜೂತಿ ಮೇ ಮಕ್ಕರ್’ ಅನ್ನೋ ಈ ವರ್ಷ ತೆರೆಕಂಡಿತ್ತು. ‘ಸ್ತ್ರಿ’ ಪಾರ್ಟ್ 2ಗೆ ಕೂಡ ಶ್ರದ್ಧಾ ಕಪೂರ್ ಹೀರೋಯಿನ್ ಆಗಿದ್ದಾರೆ.