FILM
ಕ್ಯಾನ್ಸರ್ ಗೆ ಬಲಿಯಾದ ಮಲೆಯಾಳಂ ನಟಿ ಶರಣ್ಯ

ಕೇರಳ ಅಗಸ್ಟ್ 10: ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಶರಣ್ಯ ಶಶಿ ತಮ್ಮ 35ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ.
ಮಲೆಯಾಳಂ ನ ಕಿರುತೆರೆ ಹಾಗೂ ಚಲನ ಚಿತ್ರಗಳಲ್ಲಿ ನಟಿಸಿರುವ ನಟಿ ಶರಣ್ಯ ಅವರಿಗೆ 2012ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. 11ಕ್ಕೂ ಹೆಚ್ಚು ಬಾರಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೂ ಕ್ಯಾನ್ಸರ್ ಗೆಲ್ಲಲು ಶರಣ್ಯಾಗೆ ಸಾಧ್ಯವಾಗಿಲ್ಲ. ಕಳೆದ ಮೇ 23 ರಂದು ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಶರಣ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೆಂಟಿಲೇಟರ್ ಐಸಿಯುನಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಜೂನ್ ನಲ್ಲಿ ಕೆಲ ದಿನಗಳ ಕಾಲ ಐಸಿಯುನಿಂದ ಹೊರಬಂದಿದ್ದರು. ಆದರೆ ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟ ನಂತರ ಪುನಃ ದಾಖಲಾಗಿದ್ದರು. ಅಂತಿಮವಾಗಿ ಇಂದು ಕೊನೆಯುಸಿರೆಳೆದಿದ್ದಾರೆ.

ಶರಣ್ಯಾ ಶಶಿ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ತೀವ್ರ ಅನಾರೋಗ್ಯದ ನಡುವೆಯೂ ನಮ್ಮ ಮನೋಬಲದ ಕಾರಣಕ್ಕೆ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದರು. ಈಗ ಅವರ ನಿಧನದಿಂದ ಮಲಯಾಳಂ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಚಿಕಿತ್ಸಾ ವೆಚ್ಚಗಳಿಂದಾಗಿ ನಟಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಹೀಗಾಗಿ ಚಲನಚಿತ್ರ ಮತ್ತು ಟಿವಿ ಉದ್ಯಮದ ಅನೇಕ ಸಹ ನಟರು ನಟಿಯನ್ನು ಬೆಂಬಲಿಸಲು ಒಗ್ಗೂಡಿದರು ಮತ್ತು ಶರಣ್ಯ ಅವರಿಗೆ ಸಹಾಯ ಮಾಡಿದ್ದರು.