Connect with us

FILM

ನಟಿ ಸಮಂತಾ ಫೇಕ್ ಪೋಟೋ ವೈರಲ್ – ಇನ್ಸ್ಟಾ ಗ್ರಾಂ ಸ್ಟೋರಿ ಡಿಲಿಟ್ ಮಾಡಿದ ಸಮಂತಾ

ಹೈದರಾಬಾದ್ ಮೇ 06: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ವಿಚ್ಚೇದನ ಕಾರಣಕ್ಕೆ ಭಾರೀ ಸುದ್ದಿಯಾಗಿದ್ದರು, ಬಳಿಕ ವೆಬ್ ಸೀರಿಸ್ ಸೇರಿದಂತೆ ಸಿನೆಮಾಗಳಲ್ಲಿ ಮಿಂಚಿದ್ದ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿದ್ದಾರೆ. ಈ ನಡುವೆ ಸಮಂತಾ ಅವರ ಇನ್ಸ್ಟಾಗ್ರಾಂ ಸ್ಟೋರಿಯೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.


ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಮಂತಾ ಸೌನಾ ಬಾತ್ ಫೊಟೊ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. ಹಂಚಿಕೊಂಡಿರುವ ಫೋಟೊದಲ್ಲಿ ಸಮಂತಾ ಇನ್‌ಫ್ರಾರೆಡ್ ರೇಡಿಯೇಷನ್ ಸೆಷನ್ ಅನ್ನು ಪಡೆಯುತ್ತಿರುವುದನ್ನು ನೋಡಬಹುದು. ಫೋಟೊ ಜೊತೆಗೆ ಇನ್‌ಫ್ರಾರೆಡ್ ರೇಡಿಯೇಷನ್ ಪಡೆಯುದರಿಂದ ಆಗುವ ಅನುಕೂಲಗಳನ್ನು ಕೂಡ ಪಟ್ಟಿ ಮಾಡಿದ್ದಾರೆ. ಸಮಂತಾ ಹಂಚಿಕೊಂಡಿರುವ ಚಿತ್ರದಲ್ಲಿ ಅವರು ಟವೆಲ್‌ನಲ್ಲಿ ಕುಳಿತುಕೊಂಡು, ನವ ಯೌವನ ಪಡೆಯುತ್ತಿರುವುದನ್ನು ತೋರಿಸುತ್ತದೆ. ”ಗುಣಪಡಿಸುವಿಕೆ ಮತ್ತು ಚೇತರಿಕೆಗೆ ಪರ್ಯಾಯ ವಿಧಾನಗಳನ್ನು ನಿರಂತರವಾಗಿ ಹುಡುಕುವುದು” ಎಂದು ಫೋಟೊಗೆ ಶೀರ್ಷಿಕೆ ನೀಡಿದ್ದಾರೆ.

ಸಮಂತಾ ಅವರು ಚೇರ್ ಮೇಲೆ ಕುಳಿತಿರೋ ಫೋಟೋ, ಬಾತ್​ ಟಬ್​ನಲ್ಲಿ ಅರೆಬೆತ್ತಲಾಗಿ ಕುಳಿತಿರೋ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಮಂತಾ ಫೋಟೋ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇವರು ಅಸಲಿಗೆ ಸಮಂತಾ ಅಲ್ಲವೇ ಅಲ್ಲ. ಇದು ಫೇಕ್ ಫೋಟೋ ಅನ್ನೋದು ಫ್ಯಾನ್ಸ್​ಗೆ ಗೊತ್ತಾಗಿದೆ. ಈ ರೀತಿ ಕಿಡಿಗೇಡಿತನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಸಮಂತಾ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಅವರು ವಿಚ್ಛೇದನ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದರು. ಈಗ ಸಮಂತಾ ಎಲ್ಲವನ್ನೂ ಮರೆತು ಮುಂದಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಕೆಲವು ಕಿಡಿಕೇಡಿಗಳು ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಖಂಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *