Connect with us

FILM

ಸಂಪೂರ್ಣ ಬದಲಾದ ಜಿಂಕೆ ಮರಿ ರೇಖಾ – ನಟಿ ಈಗಿನ ಸ್ಥಿತಿ ನೋಡಿ ಶಾಕ್ ಆದ ಅಭಿಮಾನಿಗಳು

ಬೆಂಗಳೂರು ಸೆಪ್ಟೆಂಬರ್ 26: ಕನ್ನಡದ ಹುಚ್ಚ ಮತ್ತು ಚಿತ್ರ ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ರೇಖಾ ಅವರ ಈಗಿನ ಸ್ಥಿತಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕನ್ನಡದಲ್ಲಿ ಚಿತ್ರ ಸಿನೆಮಾದಲ್ಲಿ ಜಿಂಕೆ ಮರಿ ಓಡ್ತಾ ಇದೆ ನೋಡ್ಲಾ ಮಗಾ ಎಂದು ಆಕ್ಟಿವ್ ಆಗಿದ್ದ ರೇಖಾ ಅವರು ಇದೀಗ ಸೊರಗಿ ಹೋಗಿದ್ದಾರೆ, ಅವರ ಈಗಿವ ಪೋಟೋ ನೋಡಿದ್ರೆ ಶಾಕ್ ಆಗುವ ಸ್ಥಿತಿ.


ಕನ್ನಡ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡ ನಟಿ. ಗೋಲ್ಡನ್ ಸ್ಟಾರ್ ಗಣೇಶ್, ಕಿಚ್ಚ ಸುದೀಪ್ ರಂತಹ ಟಾಫ್ ಸ್ಟಾರ್ ಗಳ ಜೊತೆ ಹುಚ್ಚ, ಚೆಲ್ಲಾಟ, ಹುಡುಗಾಟದಂತಹ ಬಿಗ್ಗೆಸ್ಟ್ ಹಿಟ್ ಕೊಟ್ಟ ನಟಿ, 14 ವರ್ಷ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆದಾಕೆ 2014ರಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟರು. ಇದೀಗ ಮತ್ತೆ ರೇಖಾ ಬಂದಿದ್ದಾರೆ. ಆದರೆ ಬದಲಾದ ಲುಕ್ನಲ್ಲಿ ರೇಖಾರನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.. ಜಿಂಕೆಮರಿ ರೇಖಾ ಅಂದ್ರೆ ಆ ಕಾಲಕ್ಕೆ ಅದೆಷ್ಟು ಕ್ರೇಜ್.ಈ ಸುಂದರಿಯ ಕಣ್ಣುಗಳಿಗೆ ಹುಡುಗರು ಅದೆಷ್ಟು ಫಿದಾ ಆಗಿಬಿಟ್ಟಿದ್ದರು.


ತನ್ನ ಜೀವನದಲ್ಲಾದ ಬದಲಾವಣೆ ಬಗ್ಗೆ ಸ್ವತಃ ರೇಖಾ ಅವರೇ ಮಾಹಿತಿ ನೀಡಿದ್ದಾರೆ. ತೆಲುಗಿನ ಟಿವಿ ಚಾನೆಲ್ ಒಂದರಲ್ಲಿ ಕಾಣಿಸಿಕೊಂಡ ರೇಖಾ ಅವರು ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳಿರುತ್ತವೆ..ಇದು ಸಹಜ..ನಮ್ಮ ವೃತ್ತಿಯಲ್ಲಿ ಇಂತಹವುಗಳು ನಡೆಯುವುದಿಲ್ಲ..ಏನೇ ಆಗಲಿ ಜೀವನದಲ್ಲಿ ಮುಂದೆ ಸಾಗಬೇಕು..ಪ್ರತಿಯೊಂದು ಘಟನೆಯೂ ಜೀವನದಲ್ಲಿ ನಮಗೆ ಪಾಠದಂತಿದೆ. .. ಅದು ನಮಗೆ ಏನು ಕಲಿಸುತ್ತದೆ.. ಆ ಕೋನದಿಂದ ನೋಡಿದಾಗ ನಾನು ಈಗ ತುಂಬಾ ಬುದ್ಧಿವಂತನಾಗಿದ್ದೇನೆ ಎಂದಿದ್ದಾರೆ.


ನನಗೆ ಕೆಲವು ಆರೋಗ್ಯ ಸಮಸ್ಯೆಗಳು ಬಂದಿವೆ.. ಇನ್ನೂ ಇದೆ.. ಇದು ಆಕಸ್ಮಿಕವಾಗಿ ಸಂಭವಿಸಿದೆ.. ಅನೇಕರಿಗೆ ಆರೋಗ್ಯ ಸಮಸ್ಯೆಗಳಿವೆ. ಇದು ಸಣ್ಣ ತಲೆನೋವಾಗಿರಬಹುದು. ಇದು ದೊಡ್ಡ ಕಾಯಿಲೆಯಾಗಿರಬಹುದು.. ಆದರೆ ಹೆಚ್ಚು ಒತ್ತಡ ಹೇರಬೇಡಿ.. ಎಂದು ಒತ್ತಡದಿಂದ ಆರೋಗ್ಯ ಸಮಸ್ಯೆ ದೊಡ್ಡದಾಗುತ್ತದೆ.. ಆ ದೇವರ ಮೇಲೆ ನಂಬಿಕೆ ಇಡಿ.. ಕೆಲವೊಮ್ಮೆ ವೈದ್ಯರು ನೀಡುವ ಔಷಧಿಗಳು ಕೆಲಸ ಮಾಡದಿದ್ದರೂ ನಮ್ಮ ನಂಬಿಕೆಯೇ ನಮ್ಮನ್ನು ಕಾಪಾಡುತ್ತದೆ ಎಂಬ ರೇಖಾ ಅವರ ಮಾತು ಇದೀಗ ವೈರಲ್ ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *